
ಹೊಸನಗರ: ಪಟ್ಟಣದ ಹಿಂಭಾಗದಲ್ಲಿ ವೀರಶೈವ ಪತ್ತಿನ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿರುವ ಸುದ್ದಿಮನೆಯ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
VIDEO REPORT: ಹೊಸನಗರದಲ್ಲಿ ಕಳ್ಳತನ ಸುದ್ದಿ ನೋಡಲು ಈ ಕೆಳಗಿನ ಲಿಂಕ್ ಒತ್ತಿ
ಸುದ್ದಿಮನೆಯ ಬೀಗ ಒಡೆದು ಬ್ಯಾಂಕ್ ಕ್ಯಾಶ್ ಕೌಂಟರ್ ನಲ್ಲಿದ್ದ ರೂ.1500 ಹಣ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ವೀರಶೈವ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಪಿ.ನಂಜುಂಡಪ್ಪ, ಬುಧವಾರ ರಾತ್ರಿ ಕಚೇರಿ ಕೆಲಸ ಮುಗಿದ ನಂತರ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ತೆರಳಿದ್ದಾರೆ. ರಾತ್ರಿ ಕಳ್ಳತನ ನಡೆದಿದ್ದು ರೂ1500 ನಗದು ದೋಚಲಾಗಿದೆ. ಆದರೆ ಯಾವುದೇ ಲೆಕ್ಕಾಚಾರ ಕಡತಗಳು ಕಳ್ಳತನವಾಗಿಲ್ಲ. ಸೇಫಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದರು.