
ಹೊಸನಗರಕ್ಕೆ ಸುವ್ಯವಸ್ಥಿತ ಗುರುಭವನ ನಿರ್ಮಾಣ : ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ
ಹೊಸನಗರ: ತಾಲೂಕಿನಲ್ಲಿ ಶಿಕ್ಷಣ ಉತ್ತಮವಾಗಿದೆ ಆದರೆ ಶಿಕ್ಷಕರಿಗೆ ಅಗತ್ಯವಾದ ಗುರುಭವನದ ಕೊರತೆ ಇದೆ. ಸುವ್ಯವಸ್ಥಿತ ಗುರು ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ಶನಿವಾರ ತಾಲೂಕಿನ ನಗರ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಹೊಸನಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಬಾಲಕ ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಈಗಿರುವ ಗುರುಭವನ ಶಿಥಿಲಗೊಂಡಿದೆ. ನೂತನ ಗುರುಭವನ ನಿರ್ಮಾಣಕ್ಕೆ ನನ್ನ ಅನುದಾನ ನೀಡುತ್ತೇನೆ. ಸರ್ಕಾರದಿಂದ ಅನುದಾನ ತರೋಣ ಒಟ್ಟಾರೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿ ಎಂದರು.
ಕಳೆದ ಎಸ್ಎಸ್ಎಲ್ಸಿ ಪಲಿತಾಂಶದಲ್ಲಿ ತಾಲೂಕಿನ 23 ಶಾಲೆಗಳು ಮಾಡಿದ ಸಾಧನೆ ಸಾಮಾನ್ಯವಲ್ಲ. ಪಿಯು ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಕೂಡ ಆಧ್ಯತೆ ನೀಡುವಂತೆ ಸೂಚಿಸಿದರು.
ಈ ವೇಳೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ರಿಪ್ಪನಪೇಟೆ ಕಾಲೇಜು ಪ್ರಾಚಾರ್ಯ ವಾಸುದೇವ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾಸಂಸ್ಥೆ ಕಾರ್ಯದರ್ಶಿ ರವಿಕುಮಾರ ಹುಲ್ಲರಿಕೆ, ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಸಂಗೀತಾ ಯು, ಉಪಾಧ್ಯಕ್ಷೆ ಸುಮನಾ, ಸದಸ್ಯರಾದ ಕರುಣಾಕರ ಶೆಟ್ಟಿ, ಸುಮತಿದಾಸ್, ಕೊಡಚಾದ್ರಿ ಪದವಿ ಕಾಲೇಜು ಸಮಿತಿ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಆಡಿಟರ್ ಮಧುಸೂದನ ನಾವುಡ, ಪ್ರಾಚಾರ್ಯರಾದ ಗೀತಾ ಬಾಲಚಂದ್ರ, ಮಹಮದ್ ನಜಹತ್, ಸ್ವಾಮಿರಾವ್, ಗಣೇಶ ಕೆ.ಎಸ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ, ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪಂಡರಿನಾಥ್, ಉಪನ್ಯಾಸಕ ಹೆಚ್.ಹೆಚ್ ಶೇಷಾದ್ರಿ, ಡಾ.ವೈ.ಕೃಷ್ಣಮೂರ್ತಿ, ರಮೇಶಕುಮಾರ್, ಎಂ.ವಿ.ಜಗನ್ನಾಥ್, ಎಸ್.ನರಸಿಂಹಮೂರ್ತಿ ಇದ್ದರು.
ಶೇಷಾದ್ರಿ ಸ್ವಾಗತಿಸಿ, ಕುಮಾರ್ ವಂದಿಸಿದರು. ಉಪನ್ಯಾಸಕ ಗಂಗಾಧರ ಕೆ.ಎಸ್ ನಿರೂಪಿಸಿದರು.