ಹೊಸನಗರ ತಾಲೂಕು ಜೆಸಿಬಿ ಹಿಟಾಚಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಧರ್ಮ ಗೇರುಪುರ ಆಯ್ಕೆ | ನಿಕಟಪೂರ್ವ ಅಧ್ಯಕ್ಷ ಕಾರಣಗಿರಿ ಸುರೇಶ್ ಶೆಟ್ಟರಿಗೆ ಬೀಳ್ಕೊಡುಗೆ

ಹೊಸನಗರ: ತಾಲೂಕು ಜೆಸಿಬಿ ಹಿಟಾಚಿ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಧರ್ಮ ಗೇರುಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಸಂಘದ ನಿಕಟಪೂರ್ವ ಅಧ್ಯಕ್ಷ ಕಾರಣಗಿರಿ ಸುರೇಶ್ ಟಿ.ಶೆಟ್ಟಿ ಯವರಿಗೆ ಬೀಳ್ಕೊಡುಗೆ ನೀಡಲಾಯಿತು.
 ಗೌರವಾಧ್ಯಕ್ಷ ಶ್ರೀಧರ ಹಳಗುಂದ, ಖಜಾಂಚಿ ಮಹೇಶ ಬಾಣಿಗ, ಕಾರ್ಯದರ್ಶಿ ಸಂತೋಷ್ ಕೋಡೂರು, ರಘು ಪಿ ರಿಪ್ಪನಪೇಟೆ, ಮಂಜುನಾಥ ನಂಜವಳ್ಳಿ, ಸೀನಾ ರೆಡ್ಡಿ ಮಳಲಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.
Exit mobile version