
ಹೊಸನಗರ: ಎಲ್ಲಿ ನೋಡಿದರೂ ಕಸದ ರಾಶಿಯಿಂದ ಗಬ್ಬೆದ್ದು ಹೋದ ಕಲ್ಲುಹಳ್ಳ ಹಿನ್ನೀರು ಪ್ರದೇಶಕ್ಕೆ ತಹಶೀಲ್ದಾರ್ ವಿ.ಎಸ್.ರಾಜೀವ್ ಭೇಟಿ ನೀಡಿ ಪರಿಶೀಲಿಸಿದರು.
ಶರಾವತಿ ನದಿಯ ನೀರನ್ನು ಮಲೀನಗೊಳಿಸುತ್ತಿರುವ ಇಲ್ಲಿಯ ಅವ್ಯವಸ್ಥೆ ಬಗ್ಗೆ ಗುಡ್ ಮಾರ್ನಿಂಗ್ ಕರ್ನಾಟಕ ಫೇಸ್ ಬುಕ್ ಪೇಜ್ (facebook page) ನಲ್ಲಿ ನೇರ ಪ್ರಸಾರದ ಮೂಲಕ ಗಮನಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವಿ.ಎಸ್.ರಾಜೀವ್ ಪರಿಶೀಲಿಸಿದರು.
ಗುಡ್ ಮಾರ್ನಿಂಗ್ ಕರ್ನಾಟಕ Facebook page
ಕಲ್ಲುಹಳ್ಳ ಪ್ರದೇಶ ಮೇಲಿನ ಬೇಸಿಗೆ ವ್ಯಾಪ್ತಿಗೆ ಬರಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ವಿ.ಎಸ್.ರಾಜೀವ್ ಭರವಸೆ ನೀಡಿದರು.
ಅ.2 ರಂದು ಮಹಾತ್ಮ ಗಾಂಧಿ ಜಯಂತಿ. ಇದರ ಅಂಗವಾಗಿ ದೇಶವ್ಯಾಪಿ ಸ್ವಚ್ಚತಾ ಅಭಿಯಾನ ನಡೆಯಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಪೊರಕೆ ಹಿಡಿಯಲಿದ್ದಾರೆ. ಕಸ ಇರದ ಜಾಗದಲ್ಲಿ ಪೊರಕೆ ಹಿಡಿಯುವುದಕ್ಕಿಂತ ಶರಾವತಿ ನದಿಯನ್ನು ಮಲೀನವಾಗದಂತೆ ತಡೆಯಬೇಕಿದೆ. ಹೊಸನಗರಕ್ಕೆ ನೀರು ಒದಗಿಸುವ ಶರಾವತಿಯ ಕಲ್ಲುಹಳ್ಳ ಪ್ರದೇಶವನ್ನು ಕಸದಿಂದ ಮುಕ್ತ ಮಾಡಲಿ ಎಂಬುದು ರಾಜೇಶ್, ಪ್ರಶಾಂತ್, ಶ್ರೀಧರ ಭಂಡಾರಿ ಸೇರಿದಂತೆ ಸ್ಥಳೀಯರ ಆಶಯವಾಗಿದೆ.