
ಕಾಂಗ್ರೆಸ್‌ನಿಂದ ಸಂವಿಧಾನಕ್ಕೆ ಅಪಚಾರ : ಹೊಸನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಂಕಿತ್ ಮೇಕೇರಿ | ಹೊಸನಗರ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ಹೊಸನಗರ: ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ರಾಜ್ಯಪಾಲರಿಗೆ ಅಗೌರವ ತೋರಿಸುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಇದರ ಹೊಣೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಸಲ್ಲುತ್ತದೆ ಎಂದು ತಾಲೂಕು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಂಕಿತ್ ಮೇಕೇರಿ ಆರೋಪಿಸಿದರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ಹೊಸನಗರದಲ್ಲಿ ಮೊನ್ನೆ ದಿನ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಮಾನ್ಯ ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರಿಂದ ತೋರಿದ ಗೂಂಡಾ ವರ್ತನೆ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು.
ಮಾತೆತ್ತಿದರೆ ಸಂವಿಧಾನ ಬಗ್ಗೆ ಮಾತನಾಡುವ ಕಾಂಗ್ರೆಸಿಗರು, ಸಂವಿಧಾನ ಬದ್ಧ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ಅಗೌರವ ತೋರುವ ಮೂಲಕ ತಮ್ಮದು ಬೂಟಾಟಿಕೆ ನಿಲುವು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ದಂಡಾಧಿಕಾರಿ ಭರತರಾಜ್ ಮೂಲಕ ಬಿ ಕೆ ಹರಿಪ್ರಸಾದ್ ರವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಶಾಸಕಸ್ಥಾನ ರದ್ದುಗೊಳಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೊಸನಗರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಶ್ರೀಪತಿರಾವ್, ಯುವಮೋರ್ಚಾ ಅಧ್ಯಕ್ಷ ವಿಶ್ವನಾಥ್ ಗಂಧ್ರಳ್ಳಿ, ಮಂಡಲ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಲ್ಕೊಪ್ಪ, ಹೊಸನಗರ ಮಂಡಲ ಟೌನ್ ಯುವ ಮೋರ್ಚಾ ಅಧ್ಯಕ್ಷರಾದ ಮಹೇಂದ್ರ, ಪ್ರಮುಖರಾದ ಸತ್ಯನಾರಾಯಣ, ಮಂಜು ಸಂಜೀವ್, ವಿಜಯ್ ಕಾವೇರಿ, ಕೃಷ್ಣವೇಣಿ, ಶಶಿಕಲಾಅನಂತ್, ಮನೋಜ್ ಪೂಜಾರಿ, ಕೆವಿ ಮುರಳಿ, ಮಂಜುನಾಥ್ ಗೌಟೂರ್, ಆದರ್ಶ , ಪುರುಷೋತ್ತಮ ಬೇದೂರು, ಮಹೇಶ್ ದೇವರಸಲಿಕೆ, ಸತೀಶ್ ಸೋನಲೆ, ಪವನ್ ಗೊರಳ್ಳಿ ಹಾಜರಿದ್ದರು.
ಚಿತ್ರ: 29hos1p ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ರಾಜ್ಯಪಾಲರ ಮೇಲಿನ ಅಗೌರವ ಖಂಡಿಸಿ ಪ್ರತಿಭಟನಾ ಮನವಿ ಸಲ್ಲಿಸಲಾಯಿತು. ಶ್ರೀಪತಿ ರಾವ್, ವಿಶ್ವನಾಥ ಗಂಧ್ರಳ್ಳಿ, ಅಂಕಿತ್ ಮೇಕೇರಿ ಇದ್ದರು.
