![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
IMPACT| ಬಟ್ಟೆಮಲ್ಲಪ್ಪ ಸರ್ಕಲ್ ನಿಲ್ದಾಣಕ್ಕೆ ಗ್ರಾಪಂ ಅಧ್ಯಕ್ಷರ ದೌಡು | ಎರಡು ದಿನದಲ್ಲಿ ಸ್ವಚ್ಚತೆ ಮಾಡಿಕೊಡುವ ಭರವಸೆ
ಹೊಸನಗರ: ತಾಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ನಿಲ್ದಾಣ, ಮಾರುಕಟ್ಟೆ, ಶೌಚಾಲಯದ ಅಶೌಚ ಮತ್ತು ಅವ್ಯವಸ್ಥೆ ಬಗ್ಗೆ ಸುದ್ದಿ ಪ್ರಕಟ ಆಗುತ್ತಿದ್ದಂತೆ ಹರಿದ್ರಾವತಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ದೌಡಾಯಿಸಿ ಪರಿಶೀಲಿಸಿದರು ಮಾತ್ರವಲ್ಲದೇ ಎರಡು ದಿನದಲ್ಲಿ ಅವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದರು.
ಹೌದು ಬಟ್ಟೆಮಲ್ಲಪ್ಪ ಸರ್ಕಲ್ ನಿಲ್ದಾಣ ಮತ್ತು ಶೌಚಾಲಯದ ದುರಾವಸ್ಥೆ ಬಗ್ಗೆ ಬೆಳಕು ಚೆಲ್ಲಲಾಗಿದ್ದು. ಈ ಹಿನ್ನೆಲೆಯಲ್ಲಿ ಹರಿದ್ರಾವತಿ ಗ್ರಾಪಂ ಅಧ್ಯಕ್ಷ ಕೆ.ಆರ್.ಮಂಜುನಾಥ್, ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿ ಬುಧವಾರವೇ ಸ್ವಚ್ಚತೆಗೊಳಿಸುವ ಭರವಸೆ ನೀಡಿದರು. ಇನ್ನು ಹೊಸ ಬಸ್ಸು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆ ಇದೆ. ಸಂತೆ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆ ಇದ್ದು ಈ ಸಂಬಂಧ ಮಾನ್ಯ ಶಾಸಕರನ್ನು ಭೇಟಿ ಮಾಡಿ ಮುಂದಿನ ಕ್ರಮದ ಬಗ್ಗೆ ಮನವಿ ಮಾಡಲಾಗುವುದು ಎಂದರು.
ಇನ್ನು ಸ್ವಚ್ಚತಾ ವಾಹನ ಬಳಕೆ ಸಂಬಂಧ ಕಸ ವಿಲೇವಾರಿ ಘಟಕದ ಒಂದಷ್ಟು ಕೆಲಸ ಬಾಕಿ ಇದೆ. ಇದು ಮುಗಿದ ನಂತರ ವಾಹನವನ್ನು ಸ್ವಚ್ಚತೆಗಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಈ ವೇಳೆ ಗ್ರಾಪಂ ಸದಸ್ಯರಾದ ನೇತ್ರಾವತಿ ಗೋಪಾಲ್, ಸೀತಾ, ಸಂತೋಷಕುಮಾರ್, ಗುರುಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಶೇಖರಪ್ಪ, ಪ್ರವೀಣ್, ಶರೀಫ್, ಪ್ರಗತ್, ರಾಜು, ಮುತಾಲಿಕ್, ಖಾಸೀಂ, ಆಟೋ ಚಾಲಕರು, ಇತರರು ಇದ್ದರು.