
-
ಅಕ್ಟೋಬರ್ 28| ಕಾರಗಡಿಯಲ್ಲಿ ಸಾಹಿತ್ಯ ಹುಣ್ಣಿಮೆಯಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ
-
ಹುಣ್ಣಿಮೆ ಉದ್ಘಾಟಿಸಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್
ಹೊಸನಗರ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹುಣ್ಣಿಮೆ ದಿನ ಏರ್ಪಡಿಸುವ ಮನೆ-ಮನ ಸಾಹಿತ್ಯ ಕಾರ್ಯಕ್ರಮ 28ರಂದು ಕಾರಣಗಿರಿಯಲ್ಲಿ ನಡೆಯಲಿದೆ.
ಭೂಮಿ ಹುಣ್ಣಿಮೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ಪದಾಧಿಕಾರಿಗಳ ಜೊತೆಯಲ್ಲಿ ಸಮಾಲೋಚನೆ ಸಭೆ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು, ಕಸಾಸಾಂ ವೇದಿಕೆ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಿಶ್ರಾಂತ ಪ್ರಾಂಶುಪಾಲ ಪ್ರೊ. ನಳಿನಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಭೂಮಿ ಹುಣ್ಣಿಮೆ ಮಹತ್ವಸಾರುವ ಮಣ್ಣಿಗೊಂದು ಹುಣ್ಣಿಮೆ ವಿಷಯ ಕುರಿತು ಸಾಹಿತಿಗಳು, ಉಪನ್ಯಾಸಕ ಶ್ರೀಪತಿ ಹಳಗುಂದ, ಗ್ರಹಣ ಕುರಿತು ಹನಿಯ ರವಿ ಮಾತನಾಡಲಿದ್ದಾರೆ.
ಸೋಭಾನೆ, ಭೂಮಿಗೀತೆಗಳನ್ನು ಕಲಾನಾಥೇಶ್ವರ ಯುವತಿ ಮಂಡಳಿ ಕಲಾವಿದರು, ಗಾಯಕರಾದ ಎನ್. ವಿ. ಲಲಿತಾ, ಕು. ಯಶಸ್ವಿನಿ, ಸುರೇಶ್ ಕುಮಾರ್, ಅಶ್ವಿನಿ, ಭಾರತಿ ಭಟ್ ಮತ್ತು ತಂಡದವರು ಹಾಡುಹೇಳಲಿದ್ದಾರೆ. ವಿಶ್ರಾಂತ ಪ್ರಿನ್ಸಿಪಾಲ ಮಾರ್ಷಲ್ ಶರಾಮ್ ಕಥೆ ಹೇಳಲಿದ್ದಾರೆ. ಕವಿಗಳಾದ ಗಣೇಶ್ ಮೂರ್ತಿ ನಾಗರಕೊಡಿಗೆ, ಕೆಸಿನಮನೆ ನಾ. ರತ್ನಾಕರ, ತಿರುಪತಿ ನಾಯ್ಕ, ಎಡ್ವರ್ಡ್ ಡಿಸೋಜ, ನಾರಾಯಣ ಟೈಲರ್, ಗೀತಾ ಚಂದ್ರಶೇಖರ, ಪ್ರವೀಣ್ ಎಂ, ಎನ್. ಮಂಜುನಾಥ ಕಾಮತ್, ಪ್ರಕಾಶ್ ಶೇಟ್, ಪ್ರಕಾಶ್ ಅವರುಗಳು ಕವನ, ಹನಿಗವನ ವಾಚಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಸಾಪ ತಾಲ್ಲೂಕು ಅಧ್ಯಕ್ಷ ತ. ಮ. ನರಸಿಂಹ, ಕಜಾಪ ತಾಲ್ಲೂಕು ಅಧ್ಯಕ್ಷ ಪರಮೇಶ್, ಕಸಾಸಾಂ ವೇದಿಕೆ ಅಧ್ಯಕ್ಷರ ರಾಘವೇಂದ್ರ ನಗರ, ಶಾಂತಾರಾಮ್ ಪ್ರಭು, ಕಲಗೋಡು ರತ್ನಾಕರ, ಎಂ. ವಿ. ಜಯರಾಮ್, ಬಂಡಿ ರಾಮಚಂದ್ರ, ದೊಡ್ಡಮನೆ ಲಕ್ಷ್ಮೀನಾರಾಯಣ, ಬಸಪ್ಪಗೌಡ, ದೇವರಾಜ್, ಅಂಬ್ರಯ್ಯಮಠ, ಶ್ರೀಪತಿ, ಉಮೇಶ್ ಹಾಲಗದ್ದೆ, ದೇವಾನಂದ್ ಭಾಗವಹಿಸಲಿದ್ದಾರೆ.