ಅರಣ್ಯ ಅಧಿಸೂಚನೆ, ಮುಟೇಷನ್ ಆಗದಿದ್ದರೂ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು | ಕಾಲಂ 9 ರಲ್ಲಿ ಪಿಎಫ್ ರದ್ದು ಮಾಡಲು‌ ಮನವಿ | ರಮೇಶ ಹೆಗ್ಡೆ ನೇತೃತ್ವದಲ್ಲಿ ಕರಿಮನೆ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ

ಅರಣ್ಯ ಅಧಿಸೂಚನೆ, ಮುಟೇಷನ್ ಆಗದಿದ್ದರೂ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು | ಕಾಲಂ 9 ರಲ್ಲಿ ಪಿಎಫ್ ರದ್ದು ಮಾಡಲು‌ ಮನವಿ | ರಮೇಶ ಹೆಗ್ಡೆ ನೇತೃತ್ವದಲ್ಲಿ ಕರಿಮನೆ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ

ಶಿವಮೊಗ್ಗ: ಅರಣ್ಯ ಅಧಿಸೂಚನೆ ಹೊರಡಿಸದಿದ್ದರೂ.. ಮುಟೇಷನ್ ಆಗದಿದ್ದರು ಕೂಡ ಕರಿಮನೆ ಭಾಗದ ರೈತರ ಪಹಣಿಯಲ್ಲಿ ಸೂಚಿತ ಅರಣ್ಯ ಎಂದು ದಾಖಲು ಮಾಡಲಾಗಿದ್ದು ಕೂಡಲೇ ರದ್ದು ಪಡಿಸುವಂತೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ ಹೆಗ್ಡೆ ನೇತೃತ್ವದಲ್ಲಿ ಕರಿಮನೆ ಗ್ರಾಮಸ್ಥರ ವೇದಿಕೆಯಿಂದ ಎಡಿಸಿ ಸಿದ್ದಲಿಂಗ ರೆಡ್ಡಿಗೆ ಮನವಿ ಸಲ್ಲಿಸಲಾಯಿತು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ರಮೇಶ ಹೆಗ್ಡೆ, ಹೊಸನಗರ ತಾಲೂಕು ಕರಿಮನೆ ಗ್ರಾಪಂ ಕರಿಮನೆ ಗ್ರಾಮದ ಸ.ನಂ 8, 27, 72, 106, 124, 144, 189 ರ ಪಹಣಿಯ ಕಾಲಂ 9 ರಲ್ಲಿ ಸೂಚಿತ ಅರಣ್ಯ ಎಂದು ದಾಖಲಾಗಿದೆ. ಆದರೆ ಕಂದಾಯ ಇಲಾಖೆ ದಾಖಲೆಯಲ್ಲಿ ದನದ ಮುಫತ್ತು ಎಂದಿದೆ. ರೈತರು‌ ತಮ್ಮದಲ್ಲದ ತಪ್ಪಿಗೆ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.

ಕರಿಮನೆ ಗ್ರಾಮದ ಮೇಲ್ಕಂಡ ಸನಂಗಳಲ್ಲಿ 250 ಕ್ಕು ಹೆಚ್ಚು ಕುಟುಂಬಗಳು ಮನೆ ಕಟ್ಟಿಕೊಂಡು, ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ತಲತಲಾಂತರದಿಂದ ಬದುಕಿ ಬಾಳುತ್ತಿದ್ದಾರೆ. ಈ ಜಮೀನಿನಲ್ಲಿ ಭತ್ತ, ಅಡಿಕೆ ತೋಟ, ದೇವಸ್ಥಾನ, ಅಂಗನವಾಡಿ, ಗ್ರಾಪಂ ಕಾರ್ಯಾಲಯ ಸೇರಿದಂತೆ ಮೂಲಸೌಕರ್ಯಗಳು ಸಾಕಾರಗೊಂಡಿವೆ. ಆದರೆ ಯಾವುದೇ ಅರಣ್ಯ ಅಧಿಸೂಚನೆ ಇಲ್ಲದೇ, ಮುಟೇಷನ್ ಆಗದೇ ಪಹಣಿಯ ಕಾಲಂ 9 ರಲ್ಲಿ ಸೂಚಿತ ಅರಣ್ಯ ಎಂದು ದಾಖಲು ಮಾಡಲಾಗಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರಂತೆ ಸೆಕ್ಷನ್ 94(ಎ), 94(ಬಿ), 94(ಸಿ), 94(ಸಿಸಿ) ನಿಯಮಗಳಡಿಯಲ್ಲಿ ಬಗರ್ ಹುಕುಂ ಸಾಗುವಳಿ, ವಸತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇ ಇಡಲಾಗಿದೆ. ಇದರಿಂದಾಗಿ ಅರಣ್ಯ ವಲ್ಲದ, ದನದ ಮುಫತ್ತಾಗಿರು ಸನಂಗಳಲ್ಲಿ ಮನೆ ಜಮೀನು ಮಾಲಿಕತ್ವದಿಂದ ಕರಿಮನೆ ಗ್ರಾಮದ ಜನರು ವಂಚಿತರಾಗಿದ್ದಾರೆ ಎಂದರು.

ಕರಿಮನೆ ಗ್ರಾಮದ ಸನಂ 106 ಕಾಲಂ 9 ರಲ್ಲಿ ಮೂಲತಃ ದನದ ಮುಫತ್ತು ಎಂದು ದಾಖಲಾಗಿತ್ತು. ನಂತ ಸೂಚಿತ ಅರಣ್ಯ ಎಂದು ದಾಖಲಾಯಿತು. 2011 ರಲ್ಲಿ ಮತ್ತು ದನದ ಮುಫತ್ತು ಎಂದು ಮರುದಾಖಲಾಗಿದೆ. ಇದರಂತೆಯೇ ಉಳಿದ ಸನಂಗಳ ಕಾಲಂ 9 ರಲ್ಲಿ ಯಾವುದೇ ಅಧಿಸೂಚನೆ ಆಗದೇ.. ಮುಟೇಷನ್ ಆಗದೇ ಸೂಚಿತ ಅರಣ್ಯ ಎಂದು ದಾಖಲು ಮಾಡಿರುವುದನ್ನು ಕೂಡಲೇ ರದ್ದು ಪಡಿಸಿ, ರೈತರು ಕೂಲಿಕಾರ್ಮಿಕರ ಹಿತರಕ್ಷಣೆ ಮಾಡುವಂತೆ ಮನವಿ ಮಾಡಿದರು.
ಕರಿಮನೆ ಗ್ರಾಮಸ್ಥರ ವೇದಿಕೆಯ ಅಧ್ಯಕ್ಷ ಎಸ್.ಪಿ.ಪರ್ವತಪ್ಪಗೌಡ, ಕಾರ್ಯದರ್ಶಿ ಎಸ್.ಎಂ.ಹರೀಶ್, ಗ್ರಾಪಂ ಉಪಾಧ್ಯಕ್ಷ ರಮೇಶ ಹಲಸಿನಳ್ಳಿ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ ಪಟೇಲ್, ನಗರ ಸೊಸೈಟಿ‌ ನಿರ್ದೇಶಕ ಸಾದಗಲ್ ಅಂಬರೀಷ್ ಇತರರು ಇದ್ದರು.

Exit mobile version