
HOSANAGARA| ಕೊಡಚಾದ್ರಿಗೆ ಸಾಗುವ ಗೌರಿಕೆರೆ – ಕಟ್ಟಿನಹೊಳೆ ಮಧ್ಯದಲ್ಲಿ ರಸ್ತೆ ಪಕ್ಕದ ಧರೆ ಕುಸಿತ
ಹೊಸನಗರ: ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾದಂತೆ ಅನಾಹುತಗಳು ಕೂಡ ಹೆಚ್ಚಾಗುತ್ತಿದೆ. ಕೊಡಚಾದ್ರಿ ಗಿರಿಗೆ ತೆರಳುವ ಗೌರಿಕೆರೆ ಕಟ್ಟಿನಹೊಳೆ ಮಾರ್ಗ ಮಧ್ಯದಲ್ಲಿ PWD ರಸ್ತೆ ಪಕ್ಕದಲ್ಲಿ ಧರೆ ಬಾರೀ ಪ್ರಮಾಣದಲ್ಲಿ ಕುಸಿದಿದೆ.
ನಾಗೋಡಿ ಹಾಲ್ಮನೆ ರಸ್ತೆಯ ಧರೆ ಕುಸಿತ
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೋಡಿ ಗ್ರಾಮದ ಹಾಲ್ಮನೆಯ ರಸ್ತೆ ಮಳೆಯಿಂದಾಗಿ ಹಾನಿಗೊಂಡಿದೆ.
ಸಿದ್ದನಾಯ್ಕ ಇವರ ಮನೆಯಿಂದ ನೀಲಮ್ಮ ಪದ್ಮ ನಾಯ್ಕ ಇವರ ಮನೆಗೆ ಹೋಗುವ ಸಾರ್ವಜನಿಕ ರಸ್ತೆಯ ಪಕ್ಕದ ಮಣ್ಣು ಕುಸಿತಕ್ಕೆ ಒಳಗಾಗಿದೆ. ಅಲ್ಲದೇ ಗುರುಟೆಯಿಂದ ಸಂಪದಮನೆವರೆಗಿನ ಸಾರ್ವಜನಿಕ ರಸ್ತೆಯು ಮಳೆಯಿಂದಾಗಿ ಹಾನಿಯಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಉಪಾಧ್ಯಕ್ಷೆ ವಿನೋದ ಗುರುಮೂರ್ತಿ, ಸದಸ್ಯ ಚಂದಯ್ಯ ಜೈನ್, ಪಿಡಿಒ ಪವನ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.