HOSANAGAR| ಮುಂಡಳ್ಳಿ ಸಮೀಪ ರಸ್ತೆಗೆ ಅಡ್ಡಲಾಗಿ‌ ಬಿದ್ದ ಬೃಹತ್ ಮರ | ಬೆಳಗ್ಗಿನ ಜಾವ 4 ಗಂಟೆ ಕಾಲ ಸಂಚಾರ ಬಂದ್

ಹೊಸನಗರ: ಶಿವಮೊಗ್ಗ ಹೊಸನಗರ ನಗರ ಮಾಸ್ತಿಕಟ್ಟೆ – ಕುಂದಾಪುರ ಉಡುಪಿ ಮಾರ್ಗದ ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗ್ಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು 4 ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಈ ಭಾಗದಲ್ಲಿ ರಾತ್ರಿ ಬಾರೀ ಬಿರುಗಾಳಿ ಮಳೆ ಸುರಿದಿದ್ದು ಗಾಳಿ ರಭಸಕ್ಕೆ ಮರ ಧರಾಶಾಹಿಯಾಗಿದೆ. ಶಿವಮೊಗ್ಗ ಉಡುಪಿ‌ ನಡುವಿನ ಪ್ರಮುಖ ಮಾರ್ಗ ಇದಾಗಿದೆ. ಬೆಳಗ್ಗಿನ ಜಾವ ಆದ ಕಾರಣ ವಾಹನ ದಟ್ಟಣೆ ಅಷ್ಟಾಗಿರಲಿಲ್ಲ.

ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ 3 ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ಬೆ.7 ಗಂಟೆಗೆ ಮುಕ್ತವಾಯಿತು.

ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿವರ್ಗ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.

Exit mobile version