ನಗರ ಶ್ರೀ ನೀಲಕಂಠೇಶ್ವರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

ನಗರ ನೀಲಂಠೇಶ್ವರ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

ಹೊಸನಗರ: ಸೆ.15 ರಂದು ಉದ್ಘಾಟನೆಗೊಳ್ಳಲಿರುವ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಕಚೇರಿ, ಮತ್ತು ಬಹು ಸೇವಾ ವಾಣಿಜ್ಯ ಗೋದಾಮುಗಳ ಕಟ್ಟಡಕ್ಕೆ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ವತಿಯಿಂದ ಸಂಸದರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ನೂತನ ಕಟ್ಟಡದ ಉದ್ಘಾಟನೆಗೆ ಸಂಸದರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಹಕಾರ ಸಂಘದ ಉಪಾಧ್ಯಕ್ಷ ಕುಮಾರ ಹಿಲ್ಕುಂಜಿ, ನಿರ್ದೇಶಕರಾದ ಪ್ರದೀಪ ಹೆಂಡೆಗದ್ದೆ, ವಿಠೋಬ ಚಿಕ್ಕಪೇಟೆ, ಸಾದಗಲ್ ಅಂಬರೀಷ್, ನಾಗರಾಜ ಶೆಟ್ಟಿ, ಆದರ್ಶ ಹೆರಟೆ, ಕಾರ್ಯನಿರ್ವಹಣಾಧಿಕಾರಿ ಸಿ.ಜೆ.ವಿಷ್ಣುವರ್ಧನ್, ಕಚೇರಿ ಸಿಬ್ಬಂದಿಗಳಾದ ಶ್ರೀಜಿತ್, ಸುಗಂಧರಾಜ್, ವಿನುತಾ ಬಿ.ವೈ, ಸಂದೇಶ, ಪ್ರಶಾಂತ್ ಎಂ ಹಾಜರಿದ್ದರು.

Exit mobile version