POLICE ದಸರಾ| ನಗರ ಪೊಲೀಸ್ ಠಾಣೆಯಲ್ಲಿ ದಸರಾ ಸಂಭ್ರಮ | ಮದುಮಕ್ಕಳಂತೆ ಗಮನಸೆಳೆದ ಪಿಎಸ್ಐ ದಂಪತಿ | ಪಿಸಿಯ ರಂಗೋಲಿ ಚಿತ್ತಾರ

ಒಂದೆಡೆ ಸಾಲುಗಟ್ಟಿನಿಂತ ಪೂಜೆಗೆ ಸಜ್ಜಾದ ವಾಹನಗಳು, ತಳಿರು ತೋರಣದಿಂದ ಸಿಂಗಾರಗೊಂಡ ಠಾಣೆ.. ಮತ್ತೊಂದೆಡೆ ಮದುಮಕ್ಕಳಂತೆ ಕಂಡುಬಂದ ಪಿಎಸ್ಐ ದಂಪತಿ.. ಜೊತೆಗೆ ಸಂಭ್ರಮದಲ್ಲಿ ಪೊಲೀಸರಿಗೆ ಜೊತೆಯಾದ ಸಾರ್ವಜನಿಕರು.

ಹೌದು ಈದೃಶ್ಯ ಕಂಡುಬಂದಿದ್ದು ಶಿವಮೊಗ್ಗ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ. ಪಿಎಸ್ಐ ರಮೇಶ್ ಮತ್ತು ಪ್ರಿಯಾ ದಂಪತಿಗಳ ನೇತೃತ್ವದಲ್ಲಿ ದಸರಾ ಪೂಜೆ ವಿಶೇಷವಾಗಿ ನಡೆಯಿತು.

ಸದಾ ಖಾಕಿ ಡ್ರೆಸ್ ಕಂಡು ಬರುತ್ತಿದ್ದ ಪೊಲೀಸರು ಬಣ್ಣದ ಧಿರಿಸಿನಲ್ಲಿ ಮಿಂಚಿದರು. ಮಹಿಳಾ ಪೊಲೀಸರು ಸೀರೆಯುಟ್ಟು ಸಂಭ್ರಮಿಸಿದರು. ಪೂಜೆಯ ನಂತರ ಫೋಟೋ ಸೆಸನ್ (photo session) ಕೂಡ ನಡೆಯಿತು.

ಈ ನಡುವೆ ಪಿಸಿ ಸುಜಯ್ ಆವರಣದ ಮುಂದೆ ಚಿತ್ರಿಸಿದ ಬಣ್ಣದ ರಂಗೋಲಿ ಚಿತ್ತಾರ ಮೆಚ್ಚುಗೆಗೆ ಪಾತ್ರವಾಯಿತು.

ಎಎಸ್ಐ ಶ್ರೀಪಾದ್, ಕುಮಾರ್, ಮಂಜುನಾಥ್ ಎಂ ಜೆ, ವೆಂಕಟೇಶ್, ಪ್ರವೀಣ್ ಕುಮಾರ್, ವಿಶ್ವನಾಥ್, ಶ್ರೀಮತಿ ಸುರೇಖಾ, ಕಿರಣ್ ಕುಮಾರ್, ಅರುಣೋದಯ, ಗಿರಿ ಪ್ರಸಾದ್, ಶಾಂತಪ್ಪ, ಶ್ರೀಮತಿ ಅಭಿನಯ, ನರಸಪ್ಪ, ವಿನಯ್ ಕುಮಾರ್, ಮಂಜುನಾಥ್ ಹೆಚ್, ಮಂಜುನಾಥ್ ಖಾಕಿ ಕವಿ, ದೇವರಾಜ ನಾಯಕ, ಸುಜಯ್ ಕುಮಾರ್, ಸದ್ದಾಂ ಹುಸೇನ್, ಪ್ರಜ್ವಲ್, ನರಸಿಂಹಮೂರ್ತಿ, ನವೀನ್ ಕುಮಾರ್, ಶಶಿಧರ್, ಪ್ರಮುಖರಾದ ಅಂಬ್ರಯ್ಯಮಠ, ಕುಮಾರಭಟ್, ದಿನೇಶ್, ಸುಭಾಶ್, ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Exit mobile version