
ಶಿವಮೊಗ್ಗ: ನೇಗಿಲೋಣಿ ಗ್ರಾಮದಲ್ಲಿ ಗುಂಡೇಟಿಗೆ ಒರ್ವ ಬಲಿಯಾದ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ನಗರ ಠಾಣೆಯಲ್ಲಿ ಈ ಸಂಬಂಧ ಆ.27 ರಂದು ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ತಿಳಿದು ಬಂದ ಮಾಹಿತಿ ಆಧಾರದ ಮೇಲೆ ಕೀರ್ತಿ ಮತ್ತು ನಾಗರಾಜ್ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು.
ಗುಂಡು ಹೇಗೆ ಸಿಡಿದಿದೆ ಎಂಬುದು ತನಿಖೆಯ ನಂತರವೇ ತಿಳಿಯಲಿದೆ ಎಂದರು.
ನೇಗಿಲೋಣಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಿವಮೊಗ್ಗ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ನೀಡಿರುವ ಮಾಹಿತಿಯ ಸಂಪೂರ್ಣ VIDEO ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ