ನಾಗೋಡಿ| ಬಸ್ಸು ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಅಪಘಾ*ತ | ಬಸ್ಸಿನ ಮುಂಭಾಗ ಜಖಂ

ನಾಗೋಡಿ| ಬಸ್ಸು ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಅಪಘಾ*ತ | ಬಸ್ಸಿನ ಮುಂಭಾಗ ಜಖಂ

ಹೊಸನಗರ: ಬಸ್ಸು ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ತಾಲೂಕಿನ ನಿಟ್ಟೂರು-ನಾಗೋಡಿ‌ ಮಾರ್ಗ ಮಧ್ಯದಲ್ಲಿ ಶುಕ್ರವಾರ (ಆ.01) ಬೆಳಿಗ್ಗೆ ನಡೆದಿದೆ.

ಸಾಗರದಿಂದ ಹಸಿರುಮಕ್ಕಿ ಮಾರ್ಗವಾಗಿ ಕುಂದಾಪುರ ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು, ನಿಟ್ಟೂರು ಕಡೆ ಬರುತ್ತಿದ್ದ ರೋಡ್ ರೋಲರ್ ಹೊತ್ತ ಟಿಪ್ಪರ್ ಲಾರಿ ನಡುವೆ ಹೊಲಗಾರು ಶಾಲೆ ಬಳಿ ಅಪಘಾತ ಸಂಭವಿಸಿದೆ.

ಬಸ್ಸಿನಲ್ಲಿ 30 ಕ್ಕು ಹೆಚ್ಚು ಪ್ರಯಾಣಿಕರಿದ್ದು ಯಾವುದೇ ಅಪಾಯವಾಗಿಲ್ಲ. ಚಾಲಕನ ಕಾಲಿಗೆ ಸ್ವಲ್ಪ ಮಟ್ಟಿನ ಪೆಟ್ಟಾಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version