RIPPANPET|ಕೆಂದಾಳದಿಂಬದಲ್ಲಿ ಇಡೀ ಮನೆ ಕುಸಿತ| ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು|

ಬಾಳೂರು ಗ್ರಾಪಂ ವ್ಯಾಪ್ತಿಯ ಕೆಂದಾಳದಿಂಬಕ್ಕೆ ಪಿಡಿಒ ಭರತ್, ವಿಎ ಅಂಬಿಕಾ ಭೇಟಿ ನೀಡಿ‌ ಮನೆ ಕುಸಿತವನ್ನು ಪರಿಶೀಲಿಸಿದರು.

RIPPANPET|ಕೆಂದಾಳದಿಂಬದಲ್ಲಿ ಇಡೀ ಮನೆ ಕುಸಿತ| ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು|

ಹೊಸನಗರ: ಸುರಿದ ಬಾರೀ ಮಳೆಗೆ ಇಡೀ ಮನೆ ಕುಸಿದಿದ್ದು, ಅದೃಷ್ಟವಶಾತ್ ಆ ಮನೆಯ ನಿವಾಸಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಳೂರು ಗ್ರಾಪಂ ವ್ಯಾಪ್ತಿಯ ವಡಗೆರೆ ಶಾಲೆ ಸಮೀಪ‌ ಕೆಂದಾಳದಿಂಬದಲ್ಲಿ ನಡೆದಿದೆ.

ರಾತ್ರಿ ಘಟನೆ ಈ ಘಟನೆ ನಡೆದಿದೆ. ಅಮರ್ ಸಿಂಗ್ ಬಿನ್ ಬಿಷ್ಣುಸಿಂಗ್ ರೇಖಾ ದಂಪತಿಗಳಿಗೆ ಸೇರಿದ ಮನೆಯಾಗಿದ್ದು, ರಾತ್ರಿ ಅಲ್ಲಿ ಉಳಿಯದೇ ಸಂಬಂಧಿಕರ ಮನೆಗೆ ತೆರಳಿದ್ದ ಕಾರಣ ಅನಾಹುತದಿಂದ ಪಾರಾಗಿದ್ದು ಬದುಕಿತು ಬಡಜೀವಗಳು ಎಂಬಂತಾಗಿದೆ.

ಇಡೀ ಮನೆ ಕುಸಿತಕ್ಕೆ ಒಳಗಾಗಿದ್ದು PDO ಭರತ್, ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Exit mobile version