
-
ಹೊಸನಗರ ಕಾಂಗ್ರೆಸ್ ಕಚೇರಿ ಗಾಂಧಿಮಂದಿರದಲ್ಲಿ ಬಂಗಾರಪ್ಪ ಹುಟ್ಟುಹಬ್ಬ ಆಚರಣೆ
ಹೊಸನಗರ: ಪಟ್ಟಣದ ಕಾಂಗ್ರೆಸ್ ಕಚೇರಿ ಗಾಂಧಿ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ, ಬಡವರ ಬಂಧು ದಿ.ಎಸ್.ಬಂಗಾರಪ್ಪನವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಅಧ್ಯಕ್ಷತೆಯಲ್ಲಿ ಬಂಗಾರಪ್ಪನವರ ಭಾವಚಿತ್ರವಿಟ್ಟು ಪುಷ್ಪಾರ್ಚನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಬಂಗಾರಪ್ಪನವರ ಬದುಕು, ರಾಜಕೀಯ ಹಾದಿಯನ್ನು ಸ್ಮರಿಸಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ್ರಮುಖರಾದ ಎರಗಿ ಉಮೇಶ್, ಅಶ್ವಿನಿಕುಮಾರ್, ಶ್ರೀನಿವಾಸ ಕಾಮತ್, ಪ್ರಭಾಕರರಾವ್, ಲೇಖನಮೂರ್ತಿ, ರಾಜಮೂರ್ತಿ, ನೋರಾ ಮೆಟಿಲ್ಡಾ ಸಿಕ್ವೇರಾ, ಮಹಾಬಲರಾವ್, ಹಿಟಾಚಿ ಶ್ರೀಧರ್, ನಾಸಿರ್, ಜಿ.ಮಹಮದ್, ಎಂ.ಪಿ.ಸುರೇಶ್, ಬೃಂದಾವನ ಪ್ರವೀಣ್, ಮಹೇಂದ್ರ ಇತರರು ಇದ್ದರು.