ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ

ನಗರ ಹೋಬಳಿ ಸವಿತಾ ಸಮಾಜಕ್ಕೆ ನಿವೇಶನ ನೀಡುವಂತೆ ಸಂಜೀವ ಭಂಡಾರಿ ನೇತೃತ್ವದಲ್ಲಿ‌ ಮನವಿ

ಹೊಸನಗರ: ಸವಿತಾ ಸಮಾಜದ ಬಂಧುಗಳು ತಲತಲಾಂತರದಿಂದ ಕುಲಕಸುಬು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದು ಹೋಬಳಿ‌ ಕೇಂದ್ರ ನಗರದಲ್ಲಿ ಸೂಕ್ತ ನಿವೇಶನ ನೀಡುವಂತೆ ನಗರ ಹೋಬಳಿ ಸವಿತಾ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಈ‌ ಸಂಬಂಧ ಮೂಡುಗೊಪ್ಪ‌ ಗ್ರಾಪಂ ಕಚೇರಿಗೆ ಭೇಟಿ ನೀಡಿದ ಸವಿತಾ ಸಮಾಜದ ಬಂಧುಗಳು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪರಿಗೆ ಮನವಿ ನೀಡಿದರು.

ಮನವಿ ಮಾಡಿದ ನಗರ ಹೋಬಳಿ ಘಟಕದ ಅಧ್ಯಕ್ಷ ಸಂಜೀವ ಭಂಡಾರಿ ಮಾಸ್ತಿಕಟ್ಟೆ, ಸಮಾಜದ ಸಂಘಟನೆ ಮತ್ತು ನಮ್ಮ ಸಮಾಜದ ಹಿತರಕ್ಷಣೆ ದೃಷ್ಟಿಯಿಂದ ನಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸವಿತಾ ಸಮಾಜದವರು ಸೇರಿಕೊಂಡು ಸವಿತಾ ಸಮಾಜ‌ ನಗರ ಹೋಬಳಿ‌ ಘಟಕ ವನ್ನು ಸ್ಥಾಪನೆ ಮಾಡಿರುತ್ತೇವೆ. ಅಲ್ಲದೇ ಪದಾಧಿಕಾರಿಗಳು, ಸದಸ್ಯರನ್ನು ನೇಮಿಸಿಕೊಳ್ಳಲಾಗಿದ್ದು ಅದರಂತೆ ಈಗಾಗಲೇ ಕಾರ್ಯರೂಪಕ್ಕೆ ಬಂದಿರುತ್ತದೆ ಎಂದರು.

ಸಮಾಜದ ಹಿತದೃಷ್ಟಿಯಿಂದ, ಸಂಘಟನೆಯ ಕೆಲಸ ನಿಭಾಯಿಸುವ ಮತ್ತು ವೃತ್ತಿ ಬಾಂಧವರ ಸಭೆ, ಕಾರ್ಯಕ್ರಮ ನಡೆಸಲು ಪೂರಕವಾಗಿ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ನಿವೇಶನ ನೀಡಬೇಕು. ಸವಿತಾ ಸಮಾಜ ಬಹುತೇಕ ಶೋಷಿತರಿಂದ ಕೂಡಿದ್ದು ಅತೀ ಕಡಿಮೆ ಜನಸಂಖ್ಯೆ ಹೊಂದಿದೆ. ಅಸಂಘಟಿತ ಸಮಾಜದ ಸಂಘಟನೆ, ಸಂಘದ ಕಾರ್ಯಕ್ರಮಗಳಿಗೆ ಪೂರಕವಾಗಿ ಸಮುದಾಯ ಭವನ ನಿರ್ಮಾಣ ಸಂಬಂಧ ಸೂಕ್ತ ನಿವೇಶನ ಅಗತ್ಯವಿದ್ದು, ನಮ್ಮ ನಿವೇಶನ ಕೋರಿಕೆಯನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

ನಗರ ಹೋಬಳಿ ಸವಿತಾ ಸಮಾಜದ ಅಧ್ಯಕ್ಷ ಸಂಜೀವ ಭಂಡಾರಿ ಮಾಸ್ತಿಕಟ್ಟೆ, ಜಿಲ್ಲಾ ಕೋಶಾಧಿಕಾರಿ ಎನ್.ಎಂ.ರಾಘವೇಂದ್ರ ನಿಲ್ಸಕಲ್, ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ನಿಲ್ಸಕಲ್, ಮಣಿಕಂಠ ಯಡೂರು, ಕೀರ್ತಿ‌ನಗರ, ಹೋಬಳಿ ಪ್ರಧಾನ ಕಾರ್ಯದರ್ಶಿ ಸಚಿನ್ ನೇಗಿಲೋಣಿ, ಸಹಕಾರ್ಯದರ್ಶಿ ದೇವರಾಜ ಬಾಳೆಕೊಪ್ಪ, ಮಹೇಶ ಹೆಬ್ಳೇಬೈಲು, ರಾಜೀವ್ ಅಂಡಗದೋದೂರು, ಅಶೋಕ ದಾಸನಕೊಪ್ಪ ಪಾಲ್ಗೊಂಡಿದ್ದರು.

Exit mobile version