
EXCLUSIVE|ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಕಚೇರಿ ಆವರಣದಲ್ಲಿ ಬೃಹತ್ ಮರಗಳ ಕಡಿತಲೆ ಮತ್ತು ಸಾಗಾಟ | ಮೂರು ದಿನದಲ್ಲಿ ಕಾರಣ ತಿಳಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
ಶಿವಮೊಗ್ಗ: ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ CCF ಕಚೇರಿ ಆವರಣದಲ್ಲಿರುವ ಬೃಹತ್ ಮರಗಳ ಕಡಿತಲೆ ಮಾಡಿರುವ ಸಂಬಂಧ ಮೂರು ದಿನದೊಳಗೆ ಸೂಕ್ತ ಕಾರಣ ತಿಳಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಪ್ರಧಾನ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರು, ಅರಣ್ಯ ಭವನಕ್ಕೆ ಬಂದ ಮರಗಳ ಕಡಿತಲೆ, ಸಾಗಾಟದ ಸಚಿತ್ರ ಮಾಹಿತಿಯ ದೂರ ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಇಲಾಖೆ ಕಚೇರಿಯ ಆವರಣದಲ್ಲಿರುವ ಬೃಹತ್ ಮರಗಳ ಹನನಕ್ಕೆ ಕಾರಣವೇನು? ನಿಯಮಾನುಸಾರ ಮರ ಕಡಿತಲೆಗೆ ಅರ್ಜಿ ಸಲ್ಲಿಸಿ ಮರ ಕಡಿತಲೆಗೆ ಆದೇಶ ಪಡೆಯಲಾಗಿದೆಯಾ? ಕಡಿದ ಮರಗಳನ್ನು ಯಾವ ಡಿಪೋಗೆ ಸಾಗಿಸಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ಮೂರು ದಿನದೊಳಗೆ ಬೆಂಗಳೂರು ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ
ಶಿವಮೊಗ್ಗ ಅರಣ್ಯ ಕಚೇರಿಯ ಆವರಣದಲ್ಲಿ ಬೃಹತ್ ಬೆಲೆಬಾಳುವ ಎರಡು ದಿನದ ಹಿಂದೆ ಕಡಿತಲೆ ಮಾಡಿ ಸಾಗಾಟ ಮಾಡಲಾಗಿದೆ ಎಂದು ದೂರು ಕೇಳಿ ಬಂದಿತ್ತು. ಈಗ ಈ ದೂರು ಸರ್ಕಾರದ ಮಟ್ಟಕ್ಕೆ ತಲುಪಿದೆ.