
ಶಿವಮೊಗ್ಗ: ಅಶ್ವಥ್ ನಗರದ 5ನೇ ತಿರುವಿನಲ್ಲಿ ಕಾರ್ ಶೆಡ್ ನಲ್ಲಿ ನವ್ಯಶ್ರೀ(23) ಎಂಬ ನವವಿವಾಹಿತ
ಗೃಹಿಣಿಯೋರ್ವಳು ನೇಣುಬಿಗಿದು ಸಾವನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಎಂಇಎಸ್ ಕಾಲೇಜಿನಲ್ಲಿ ಎಂಕಾಂ ಮುಗಿಸಿರುವ ನವ್ಯಶ್ರೀ (23). ಆಕಾಶ್ ಹೊಮ್ಮರಡಿಗೆ 6 ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ನವ್ಯ ಶ್ರೀ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ತುಳುಸಿ ಪೂಜೆಗೆ ಹೋಗಿ ಬಂದಿದ್ದರು. ಆದರೆ ನವ್ಯಶ್ರೀ ದಿಢೀರ್ ಸಾವಿಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.