Homeಉಡುಪಿತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಶಿವಮೊಗ್ಗ ಜಿಲ್ಲೆ

SHIMOGA-UDUPI| ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ ಮಾರ್ಗ | ಧರೆ ಕುಸಿತ ಮುಂದುರೆದರೇ ಸಂಪರ್ಕಕ್ಕೆ ಬಹುದೊಡ್ಡ ಕುತ್ತು?

SHIMOGA-UDUPI| ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ ಮಾರ್ಗ | ಧರೆ ಕುಸಿತ ಮುಂದುರೆದರೇ ಸಂಪರ್ಕಕ್ಕೆ ಬಹುದೊಡ್ಡ ಕುತ್ತು?

ಶಿವಮೊಗ್ಗ/ಹೊಸನಗರ: ಎರಡು ವರ್ಷದ ಹಿಂದೆ ಕುಸಿದಿದ್ದ ಹೆದ್ದಾರಿ ಮಾರ್ಗ ಮತ್ತೆ ಕುಸಿತಕ್ಕೆ ಒಳಗಾಗಿದೆ. ಈ ಮಾರ್ಗ ಕುಸಿದರೇ ಸಂಪರ್ಕಕ್ಕೆ ಬಾರೀ ಕುತ್ತು ತರಲಿದೆ. ಅಧಿಕಾರಿಗಳ ತುರ್ತು ಗಮನ ಹರಿಸಲೇ ಬೇಕಿದೆ.

ಹೌದು ಇದು ಶಿವಮೊಗ್ಗ ಜಿಲ್ಲೆಯಿಂದ ತೀರ್ಥಹಳ್ಳಿ ಮತ್ತು ಹೊಸನಗರ ಮಾರ್ಗವಾಗಿ ಉಡುಪಿ‌ಜಿಲ್ಲೆಗೆ ತೆರಳುವಾಗ ಮಾಸ್ತಿಕಟ್ಟೆ ಸಂಪರ್ಕಿಸುವುದು ಅನಿವಾರ್ಯ. ಮಾಸ್ತಿಕಟ್ಟೆ ಮೂಲಕ‌ ಹುಲಿಕಲ್ ಮಾರ್ಗವಾಗಿ ಉಡುಪಿ, ಮಂಗಳೂರು, ಕುಂದಾಪುರ ಸಂಪರ್ಕ ಮಾಡಬೇಕಿದೆ.

ಆದರೆ ಮಾಸ್ತಿಕಟ್ಟೆ ಯಿಂದ ಹುಲಿಕಲ್ ಮಾರ್ಗದ ಸ್ವಲ್ಪ ದೂರದ ತಿರುವಿನಲ್ಲಿ ವ್ಯಾಪಕ ಮಳೆಗೆ ಧರೆ ಕುಸಿತ ಕಾಣುತ್ತಿದೆ. ಹೆದ್ದಾರಿಯ ಡಾಂಬರೀಕರಣಕ್ಕೆ ಹೆಚ್ಚೆಂದರೆ ಎರಡು ಮೂರು ಅಡಿ ಇರಬಹುದು. ಇನ್ನೊಂದು ಸ್ವಲ್ಪ ಮುಂದುವರೆದರೂ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ.

ಮೂರು ವರ್ಷದಿಂದ ಕುಸಿತ:
ಈಭಾಗದಲ್ಲಿ ಮೂರು ವರ್ಷದ ಹಿಂದಿನಿಂದಲೂ‌ ಕುಸಿತ ಕಂಡು ಬರುತ್ತಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಹೆದ್ದಾರಿ ಅಧಿಕಾರಿಗಳು ಧಾವಿಸಿ ಮರಳು ಚೀಲಗಳನ್ನಿಟ್ಟು ತಡೆಗೋಡೆ ನಿರ್ಮಿಸಿದ್ದರು. ಈಬಾರಿ‌ ಮರಳು ಚೀಲಗಳ ಜೊತೆಯಲ್ಲೇ ಧರೆ ಕುಸಿದಿದೆ. ಸುಮಾರು 40 ಅಡಿ ಆಳವಿದ್ದು ಪ್ರಪಾತದಂತೆ ಕಂಡು ಬರುತ್ತಿದೆ. ಕುಸಿತ ಪರಿಶೀಲಿಸಿದರೆ ಭಯ ತರಿಸುವಂತಿದೆ.
ಶಿವಮೊಗ್ಗ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ಉಡುಪಿ, ಕುಂದಾಪುರ, ಮಂಗಳೂರು, ಹೀಗೆ ಬಹುತೇಕ ಜಿಲ್ಲೆಗಳ ಅಗತ್ಯವಸ್ತುಗಳ ಸರಬರಾಜಿಗೆ ಬಹುದೊಡ್ಡ ಸಂಪರ್ಕ ಇದಾಗಿದ್ದು ತುರ್ತಾಗಿ ಗಮನಹರಿಸಬೇಕಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ ಕಾರ್ಯಕ್ರಮ

ನೂಲಿಗ್ಗೇರಿಯಲ್ಲಿ ವಿಜ್ಞಾನ ಮೇಳ ಕಲಿಕಾ ಹಬ್ಬದ ಸಂಭ್ರಮ ಮಕ್ಕಳ ಪ್ರತಿಭೆಯನ್ನು ಸಾಕ್ಷೀಕರಿಸಿದ…

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!

ಇದು ಗುಡ್ಡಗಾಡು ಕಾರ್ ರೇಸ್ ಅಲ್ಲ..! ಮಾಸ್ತಿಕಟ್ಟೆ ತೀರ್ಥಹಳ್ಳಿ ಪ್ರಮುಖ ಹೆದ್ದಾರಿಯ ಕ್ರಾಸ್.!…

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ ಕಳಕಳಿ

ಇಲ್ಲಿ ದೇಶ ಕಾಯುವ ಸೈನಿಕರಿಗೆ ಟೀ ಕಾಫೀ ಉಚಿತ: ಮೆಚ್ಚುಗೆಗೆ ಪಾತ್ರವಾದ ಉದಯಕುಮಾರ್ ಶೆಟ್ಟಿ…

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!

ವಕೀಲರ ಸಮಯಪ್ರಜ್ಞೆ ಕಾರ್ಯ | ಕೆನರಾ ಬ್ಯಾಂಕ್ ಸ್ಪಂದನೆ | ಜೈಲು ಸೇರೋದು ತಪ್ಪಿಸಿಕೊಂಡ ಗ್ರಾಹಕ!…

1 of 42

Leave A Reply

Your email address will not be published. Required fields are marked *