ರೂ.3.61 ಲಕ್ಷ ಲಾಭದಲ್ಲಿ ಕರಿಮನೆ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರಿ| ಶೇ.10 ರಷ್ಟು ಡಿವಿಡೆಂಡ್ ಹಂಚಿಕೆ

ಶ್ರೀ ಚಂಡಿಕೇಶ್ವರಿ ಸಹಕಾರಿಗೆ ರೂ.3.61 ನಿವ್ವಳ ಲಾಭ:
ಶೇ.10ರಷ್ಟು ಡಿವಿಡೆಂಡ್ ಹಂಚಿಕೆ: ಅಧ್ಯಕ್ಷ ಎಸ್.ಜೆ.ಹೂವಪ್ಪಗೌಡ

ಹೊಸನಗರ: ಗ್ರಾಮೀಣ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ವರ್ಷ ರೂ.3.61 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಸ್.ಜೆ.ಹೂವಪ್ಪಗೌಡ ತಿಳಿಸಿದರು.

ತಾಲೂಕಿನ ಕರಿಮನೆಯಲ್ಲಿ ಆಯೋಜಿಸಿದ್ದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2023 -24 ಸಾಲಿನಲ್ಲಿ ರೂ.1.21 ಕೋಟಿ ವ್ಯವಹಾರ ದಾಖಲಿಸಿದ್ದು 400 ಕ್ಕು ಹೆಚ್ಚು ಸದಸ್ಯರಿಗೆ ರೂ.81 ಲಕ್ಷ ಸಾಲ ನೀಡಲಾಗಿದೆ. 3 ಲಕ್ಷ ಇದ್ದ ಶೇರು ಬಂಡವಾಳ 8 ಲಕ್ಷಕ್ಕೆ ಏರಿದೆ. ಒಟ್ಟು ಸದಸ್ಯರ ಸಂಖ್ಯೆ 708 ಆಗಿದೆ ಎಂದರು.

ನಮ್ಮ ಭಾಗದಲ್ಲಿ‌ ಬಡ ರೈತರು ಹೆಚ್ಚಿದ್ದು ಅವರಿಗೆ ಉತ್ತೇಜನ ನೀಡುವ ಸಲುವಾಗಿ ಅಡಿಕೆ ವ್ಯಾಪಾರ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಗ್ರಾಮೀಣ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ, ವಾಹನ ಸಾಲ ಸೌಲಭ್ಯವಿದೆ. ಅಲ್ಲದೇ ಮರಣೋತ್ತರ ನಿಧಿಯನ್ನು ಕೂಡ ಸ್ಥಾಪಿಸಲಾಗಿದೆ. ಠೇವಣಿದಾರರಿಗೆ ಆಕರ್ಷಕ ಶೇ.8.5 ಬಡ್ಡಿ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಲೆಕ್ಕಪರಿಶೋಧಕ ವಿಜೇಂದ್ರ ಕಾಮತ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥಾಪಕ ಅಧ್ಯಕ್ಷ ಕೆ.ಕೆ.ರಾಮಣ್ಣ ಸಂಸ್ಥೆಯ ಹುಟ್ಟು ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ.ಸಿ ಲೆಕ್ಕಪತ್ರ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.

ಉಪಾಧ್ಯಕ್ಷ ಪ್ರವೀಣ ಕೆ.ಗೌಡ, ನಿರ್ದೇಶಕರಾದ ವಾಸಪ್ಪ ಹೆಚ್, ಸುಧಾಕರ ಎಸ್.ಎಸ್, ಮೂರ್ತಿ ಎ, ರತ್ನಾಕರ ಎಂ, ಸುಂದರಾಂಗಿ ನಾಗೇಶ ಭಟ್, ವಿಲ್ಮಾ ಡಿಸೋಜ, ಗುರುಮೂರ್ತಿ ಹೆಚ್.ಎಸ್, ನಾಗೇಂದ್ರ ಹೆಚ್.ಪಿ, ಸುರೇಶ ಟಿ.ಆರ್, ಮಹೇಂದ್ರ ಕೆ, ಶ್ವೇತಾ ಉಪಸ್ಥಿತರಿದ್ದರು.

Exit mobile version