ನಗರ ಆಸ್ಪತ್ರೆ ವಿರುದ್ಧ ಅಹೋರಾತ್ರಿ ಧರಣಿ | ಅನುಮತಿ ಪಡೆಯದ ಕಾರಣ ಆಸ್ಪತ್ರೆ ಆವರಣದಿಂದ ಹೊರಬಂದು ಬಿಜೆಪಿ ಪ್ರತಿಭಟನೆ : ಇಂದು ಗ್ರಾಪಂ ಅಧ್ಯಕ್ಷೆ ಸಂಗೀತಾ ನೇತೃತ್ವದಲ್ಲಿ ಪ್ರತಿಭಟನೆ : ಕರುಣಾಕರ ಶೆಟ್ಟಿ

ನಗರ ಆಸ್ಪತ್ರೆ ವಿರುದ್ಧ ಅಹೋರಾತ್ರಿ ಧರಣಿ | ಅನುಮತಿ ಪಡೆಯದ ಕಾರಣ ಆಸ್ಪತ್ರೆ ಆವರಣದಿಂದ ಹೊರಬಂದು ಬಿಜೆಪಿ ಪ್ರತಿಭಟನೆ : ಇಂದು ಗ್ರಾಪಂ ಅಧ್ಯಕ್ಷೆ ಸಂಗೀತಾ ನೇತೃತ್ವದಲ್ಲಿ ಪ್ರತಿಭಟನೆ : ಕರುಣಾಕರ ಶೆಟ್ಟಿ

ಹೊಸನಗರ: ಹೋಬಳಿ ಕೇಂದ್ರ ನಗರದ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ಸಂಜೆ ನಾಲ್ಕು ಗಂಟೆಯ ಮೇಲೆ ವೈದ್ಯರು, ನರ್ಸ್ ಸಿಬ್ಬಂದಿಗಳ ಸೇವೆ ಇರದಿರುವುದನ್ನು ಖಂಡಿಸಿ ಬಿಜೆಪಿ‌ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ನಗರ ನಿತಿನ್, ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ನೇತೃತ್ವದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ಹೊಸನಗರ ಪಪಂ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ತಾಪಂ ಮಾಜಿ ಸದಸ್ಯರಾದ ಕೆ.ವಿ.ಕೃಷ್ಣಮೂರ್ತಿ, ಬಂಕ್ರಿಬೀಡು ಮಂಜುನಾಥ್, ಕರಿಮನೆ ಗ್ರಾಪಂ ಮಾಜಿ ಅಧ್ಯಕ್ಷ ನರ್ತಿಗೆ ಸುರೇಶ್, ಹಲವು ಪ್ರಮುಖರು ಭೇಟಿ ಮಾಡಿ ಪ್ರತಿಭಟನೆ ಸಾಥ್ ನೀಡಿದರು.

ಆವರಣದ ಹೊರಕ್ಕೆ:
ಯಾವುದೇ ಪೂರ್ವಾನುಮತಿ ಪಡೆಯದೇ ದಿಢೀರ್ ಪ್ರತಿಭಟನೆ ನಡೆಸಿ, ಮತ್ತು ಅಹೋರಾತ್ರಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಆಸ್ಪತ್ರೆ ಆವರಣದಿಂದ ಹೊರಬಂದು ಕಾರ್ಯಕರ್ತರು ಧರಣಿ ಮುಂದುವರೆಸಿದರು.

ಇಂದು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ:
ಇಂದು ಗ್ರಾಪಂ ಅಧ್ಯಕ್ಷೆ ಸಂಗೀತ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆಯಿಂದ 10 ರಿಂದ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಸೇವೆ ಸಿಗದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಗ್ರಾಪಂ ಅಧ್ಯಕ್ಷ, ಹಾಲಿ ಸದಸ್ಯ ಕರುಣಾಕರ ಶೆಟ್ಟಿ ತಿಳಿಸಿದ್ದಾರೆ.

ಪ್ರತಿಭಟನೆ ಸಂಬಂಧ ಸಂಬಂಧಪಟ್ಟ ಇಲಾಖೆಗಳಿಗೆ ಮಂಗಳವಾರವೇ ಮಾಹಿತಿ ನೀಡಿದ್ದು, ಸಮಸ್ಯೆ ಇತ್ಯರ್ಥವಾಗುವವರೆಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

Exit mobile version