
ಪಟಾಕಿ ಅಂಗಡಿಗಳ ಮೇಲೆ ದಿಢೀರ್ ದಾಳಿ
ಹೊಸನಗರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಗುರುವಾರ ಜಂಟಿ ದಿಢೀರ್ ದಾಳಿ ನಡೆಸಿದರು.
ಪಟ್ಟಣದ ಹಲವು ಅಂಗಡಿಗಳಿಗೆ ತೆರಳಿ ಪರಿಶೀಲಿಸಿದ ಅಧಿಕಾರಿಗಳು, ಸರ್ಕಾರದಿಂದ ಪರವಾನಿಗೆ ಪಡೆದುಕೊಂಡವರು ಸುರಕ್ಷಿತ ಕ್ರಮಗಳನ್ನು ಪಾಲಿಸಿ ಗ್ರೀನ್ ಪಟಾಕಿಗಳನ್ನು ಮಾರಬೇಕು. ಯಾವುದೇ ಕಾರಣಕ್ಕು ಅಪಾಯಕಾರಿ ಪಟಾಕಿಗಳನ್ನು ಮಾರದಂತೆ ತಾಕೀತು ಮಾಡಿದರು.
ಅನಧಿಕೃತವಾಗಿ ಪಟಾಕಿ ಮಾರಾಟ, ಶೇಖರಣೆ ಮತ್ತು ಸಾಗಾಟ ಮಾಡುವುದು ಅಪರಾಧ ಒಂದು ವೇಳೆ ಅಂತಹ ಘಟನೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು
ಪಟಾಕಿ ನಿರ್ವಹಣೆ ಮತ್ತು ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.
ಅಗ್ನಿಶಾಮಕ ದಳ ಮತ್ತು ತಾಪಂ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.