THIRTHAHALLI | ತೀರ್ಥಹಳ್ಳಿ‌| ಕೊನೆಗೂ ಕುಸಿಯಿತು ಬಾಳೇಬೈಲು ಕುರುವಳ್ಳಿ ನಡುವಿನ ಬೈಪಾಸ್ ತಡೆಗೋಡೆ| ಲೋಕಾರ್ಪಣೆಗೊಂಡ ಕೆಲವೇ ಸಮಯದಲ್ಲೇ ಕುಸಿದು ಬಿತ್ತು ರೂ.56 ಕೋಟಿ ವೆಚ್ಚದ ಕಾಮಗಾರಿ

THIRTHAHALLI | ತೀರ್ಥಹಳ್ಳಿ‌| ಕೊನೆಗೂ ಕುಸಿಯಿತು ಬಾಳೇಬೈಲು ಕುರುವಳ್ಳಿ ನಡುವಿನ ಬೈಪಾಸ್ ತಡೆಗೋಡೆ| ಲೋಕಾರ್ಪಣೆಗೊಂಡ ಕೆಲವೇ ಸಮಯದಲ್ಲೇ ಕುಸಿದು ಬಿತ್ತು ರೂ.56 ಕೋಟಿ ವೆಚ್ಚದ ಕಾಮಗಾರಿ

ತೀರ್ಥಹಳ್ಳಿ : ಕುರುವಳ್ಳಿ – ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ನಿರ್ಮಿಸಿರುವ 56 ಕೋಟಿ ರೂ ವೆಚ್ಚದ ತುಂಗಾ ಸೇತುವೆಯ ಬೈಪಾಸ್ ರಸ್ತೆಯ ತಡೆಗೋಡೆಗಳು ಕುಸಿದು ಬಿದ್ದಿದೆ.

ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಬಿರುಕು‌ಬಿಟ್ಟಿದ್ದ ಬಾಳೇಬೈಲು – ಕುರುವಳ್ಳಿ ಬೈಪಾಸ್ ತಡೆಗೋಡೆ (SIDE WALL) ಕೊನೆಗೂ ಸಂಪೂರ್ಣ ಕುಸಿದು ಬಿದ್ದಿದೆ.

ರಾಷ್ಟ್ರೀಯ ಹೆದ್ದಾರಿ 169a (National Highway) ಇದಾಗಿದ್ದು ರೂ.56 ಕೋಟಿ ವೆಚ್ಚದಲ್ಲಿ‌ ನಿರ್ಮಾಣ ಮಾಡಲಾಗಿತ್ತು ಮಾತ್ರವಲ್ಲ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗಿತ್ತು.

ಈಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

Exit mobile version