THIRTHAHALLI | ಪ್ರತಿಭಾ ಕಾರಂಜಿಯಲ್ಲಿ ವಿಜೇತರು | ಮನಸ್ಸಿ ಭಟ್, ಅಪೇಕ್ಷ ಸಾಧನೆ

ತೀರ್ಥಹಳ್ಳಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮನಸ್ಸಿ ಭಟ್ ಮತ್ತು ಅಪೇಕ್ಷ ಕ್ರಮವಾಗಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ

ಪ್ರಥಮ ಸ್ಥಾನ ಪಡೆದ ಮನಸ್ಸಿ ಭಟ್, ತೃತೀಯ ಸ್ಥಾನ ಪಡೆದ ಅಪೇಕ್ಷ ಇಬ್ಬರು ಶ್ರೀ ರಾಜರಾಜೇಶ್ವರಿದ ನೃತ್ಯ ವಿದುಷಿ ಅರುಂಧತಿ ವಿ ವಿ ಭಟ್ ಇವರ ವಿದ್ಯಾರ್ಥಿಗಳಾಗಿದ್ದಾರೆ.

ತಮ್ಮ ನೃತ್ಯ ಶಾಲೆಗೆ ಕೀರ್ತಿ ತಂದ ಇಬ್ಬರು ವಿದ್ಯಾರ್ಥಿಗಳನ್ನು ಅರುಂಧತಿ ವಿ ವಿ ಭಟ್ ಅಭಿನಂದಿಸಿ, ಮುಂದಿನದಿನದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

ಇನ್ನಷ್ಟು ಕೀರ್ತಿ ಸಿಗಲಿ

ಪ್ರತಿಭಾ ಕಾರಂಜಿಯ ಹೈಸ್ಕೂಲು ವಿಭಾಗದಲ್ಲಿ ಮನಸ್ಸಿ ಭಟ್ ಮತ್ತು ಅಪೇಕ್ಷ ಸಾಧನೆ ಮಾಡಿರುವುದು ಶ್ರೀ ರಾಜರಾಜೇಶ್ವರಿ ನೃತ್ಯ ಶಾಲೆಗೆ ಹೆಮ್ಮೆ ತಂದಿದೆ. ಮಕ್ಕಳು ಇನ್ನಷ್ಟು ಸಾಧನೆ ಮಾಡಲಿ

– ಅರುಂಧತಿ ವಿ ವಿ ಭಟ್, ನೃತ್ಯ ವಿದುಷಿ

Exit mobile version