ಜಿ.ಎನ್ ಮೋಹನ್ ಸೇರಿದಂತೆ ರಂಗಭೂಮಿಯ 33 ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟ

ಜಿ.ಎನ್ ಮೋಹನ್ ಸೇರಿದಂತೆ ರಂಗಭೂಮಿಯ 33 ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2025-26 ನೇ ಸಾಲಿನ ಜೀವಮಾನ ಸಾಧನೆ ಮತ್ತು ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.

2025-26ನೇ ಸಾಲಿನ ಜೀವಮಾನ ಸಾಧನೆಯ ಗೌರವ ಪ್ರಶಸ್ತಿಗೆ ರಂಗಭೂಮಿಯ ಶಶಿಧರ ಅಡಪ, ಬಿ (ದಕ್ಷಿಣ ಕನ್ನಡ ಜಿಲ್ಲೆ) ಅವರು ಭಾಜನರಾಗಿದ್ದರೆ,

ಖ್ಯಾತ ಪತ್ರಕರ್ತ, ನಾಟಕ ವಿಮರ್ಶಕ ಜಿ.ಎನ್ ಮೋಹನ್ ಸೇರಿದಂತೆ ರಂಗಭೂಮಿಯ 31 ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ.

ವಾರ್ಷಿಕ ಪ್ರಶಸ್ತಿ:
ಮಾಲತೇಶ ಬಡಿಗೆರ( ಗದಗ), ಟಿ ರಘು( ಬೆಂಗಳೂರು), ವೆಂಕಟಾಚಲ(ಬೆಂಗಳೂರು), ಮುರ್ತುಜಸಾಬ್ ಘಟ್ಟಿಗನೂರ(ಬಾಗಲಕೋಟೆ), ಚೆನ್ನಕೇಶವಮೂರ್ತಿ ಎಂ.(ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ ( ಹುಬ್ಬಳಿ ಧಾರವಾಡ), ಚಿಕ್ಕಪ್ಪಯ್ಯ(ತುಮಕೂರು), ದೇವರಾಜ ಹಲಗೇರಿ ( ಕೊಪ್ಪಳ), ಡಾ. ವೈ ಎಸ್ ಸಿದ್ದರಾಮೇಗೌಡ(ಬೆಂಗಳೂರು ದಕ್ಷಿಣ), ಅರುಣ್ ಕುಮಾರ್ ಆರ್. ಓ( ದಾವಣಗೆರೆ), ಶ್ರೀಮತಿ ರೋಹಿಣೀ ರಘುನಂದನ್( ಬೆಂಗಳೂರು), ಶ್ರೀಮತಿ ರತ್ನ ಸಕಲೇಶಪುರ( ಹಾಸನ), ವಿ.ಎನ್ ಅಶ್ವಥ್(ಬೆಂಗಳೂರು), ಶಿವಯ್ಯಸ್ವಾಮಿ ಬಿಬ್ಬಳ್ಳಿ(ಸೇಡಂ ಕಲುಬುರ‍್ಗಿ), ಕೆ.ಆಋ ಪೂರ್ಣೇಂದ್ರಶೇಖರ್( ಬೆಂಗಳೂರು), ಭೀಮನಗೌಡ ಬಿ. ಕಟಾವಿ(ಬೆಳಗಾವಿ), ಕೆ.ಮುರಳಿ(ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ ಕೋನಾಳ(ಯಾದಗಿರಿ), ಶ್ರೀಮತಿ ಸುಗಂಧಿಉಮೇಶ್ ಕಲ್ಮಾಡಿ(ಉಡುಪಿ), ಮಹೇಶ ವಿ ಪಾಟೀಲ್(ಬೀದರ್), ಶಿವಪುತ್ರಪ್ಪ ಶಿವಸಂಪಿ(ಕೊಪ್ಪಳ), ಸದ್ಯೋಜಾತಶಾಸ್ತ್ರಿ ಹಿರೇಮಠ(ವಿಜಯನಗರ), ಡಾ ಉದಯ್ ಎಸ್ ಆರ್ (ಮೈಸೂರು),

ದತ್ತಿ ಪ್ರಶಸ್ತಿ:

ಎಚ್ .ವಿ ವೆಮಕಟಸುಬ್ಬಯ್ಯ ದತ್ತಿ ಪುರಸ್ಕಾರ: ಮಂಜಪ್ಪ ಪಿ.ಎ (ಮಂಜುಕೊಡಗು), ಬಿ.ಆರ್ ಅರಿಶಿಣಕೋಡಿ ದತ್ತಿಪುರಸ್ಕಾರ: ಕಿರಣ್ ರತ್ನಾಕರನಾಯ್ಕ(ಉತ್ತರ ಕನ್ನಡ), ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಸಿ.ವಿ ಲೋಕೇಶ್ (ದೊಡ್ಡಬಳ್ಳಾಪುರ), ಶ್ರೀಮತಿ ಮಾಲತಿಶ್ರೀಮೈಸೂರು ದತ್ತಿಪುರಸ್ಕಾರ:ಎಚ್.ಪಿ ಈಶ್ವರಾಚಾರಿ(ಮಂಡ್ಯ), ನಟರತ್ನ ಚಿಂದೋಡಿವೀರಪ್ಪ ದತ್ತಿಪುರಸ್ಕಾರ:ದೊಡ್ಡಮನೆ ವೆಂಕಟೇಶ್(ಬೆಂಗಳೂರು), ಪದ್ಮಶ್ರೀ ಚಿಂದೋಡಿಲೀಲಾ ದತ್ತಿಪುರಸ್ಕಾರ: ಪಿ.ವಿ ಕೃಷ್ಣಪ್ಪ(ಬೆಂಗಳೂರು), ಕಲ್ಚರ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ನಾಗೇಂದ್ರ ಪ್ರಸಾದ್( ಬೆಂಗಳೂರು),

2024-25 ನೇ ಸಾಲಿನ ಬಾಕಿ ಇದ್ದ ವಾರ್ಷಿಕ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲೆಯ ಶಂಕರ್ ಭಟ್ ಅವರು ಆಯ್ಕೆಯಾಗಿದ್ದಾರೆ ಎಂದು ನಾಟಕ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version