
ಚಕ್ರಾದಲ್ಲಿ ಬರೋಬ್ಬರಿ 325ಮಿಮೀ ಮಳೆ ದಾಖಲು: ವಾರಾಹಿ ಯೋಜನಾ ಜಲಾನಯನ ವ್ಯಾಪ್ತಿಯಲ್ಲಿ ಬಾರೀ ಮಳೆ
ಹೊಸನಗರ: ಕಳೆದ 24 ಗಂಟೆ ಅವಧಿಯಲ್ಲಿ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 325 ಮಿಮೀ ಮಳೆ ದಾಖಲಾಗಿದೆ.
ವಾರಾಹಿ ಯೋಜನೆಯ ಜಲಾನಯನ ವ್ಯಾಪ್ತಿಯಾಗಿರುವ ಮಾಸ್ತಿಕಟ್ಟೆಯಲ್ಲಿ 205 ಮಿಮೀ, ಯಡೂರು ಭಾಗದಲ್ಲಿ 200ಮಿಮೀ, ಮಾಣಿಯಲ್ಲಿ 185ಮಿಮೀ, ಹುಲಿಕಲ್ ನಲ್ಲಿ 186ಮಿಮೀ, ಸಾವೇಹಕ್ಲು ಭಾಗದಲ್ಲಿ 139ಮಿಮೀ ಮಳೆಯಾಗಿದೆ.