ಭತ್ತದ ಒಕ್ಕಲು ಮಾಡುವಾಗ ರೈತನ ಕೈ ಕಟ್ | ದೇವಗಂಗೆಯಲ್ಲಿ ದುರ್ಘಟನೆ

ಹೊಸನಗರ: ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ರೈತನೋರ್ವನ ಕೈ ಸಿಕ್ಕಿ ಸಂಪೂರ್ಣ ತುಂಡಾದ ದುರ್ಘಟನೆ ತಾಲೂಕಿನ ದೇವಗಂಗೆಯಲ್ಲಿ ಮಂಗಳವಾರ ನಡೆದಿದೆ.

ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದೇವಗಂಗೆಯ ರೈತ ವಿಶ್ನನಾಥ ಇವರ ಕೈ ಸಂಪೂರ್ಣ ತುಂಡಾಗಿದೆ.
ಕೂಡಲೇ ಗಂಭೀರವಾಗಿ ಗಾಯಗೊಂಡ ವಿಶ್ವನಾಥನನ್ನು ಮತ್ತು ತುಂಡಾಗಿದ್ದ ಕೈಯನ್ನು ಹಿಡಿದುಕೊಂಡು ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಕೈಯನ್ನು ಮರುಜೋಡನೆ ಅಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

ದೇವಗಂಗೆ ಮಹೇಶಗೌಡ ಅವರ ಜಮೀನಿನಲ್ಲಿ ಒಕ್ಕಲು ಕೆಲಸ ನಡೆಯುತ್ತಿದ್ದು ವಿಶ್ವನಾಥ ಸೇರಿದಂತೆ 14 ಜನ ರೈತರು ಕೆಲಸ ಮಾಡುತ್ತಿದ್ದರು.
ವಿಶ್ವನಾಥ ಬಡ ರೈತನಾಗಿದ್ದು ಬಲಗೈಯನ್ನೇ ಕಳೆದುಕೊಂಡಿದ್ದು ಕುಟುಂಬದಲ್ಲಿ ಆತಂಕ ಮನೆಮಾಡಿದೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version