ಕಣ್ಕಿ ಬೇಳೂರು ಸರ್ಕಾರಿ ಶಾಲೆಯ ಸಮಸ್ಯೆ| ಮಾಹಿತಿ ಪಡೆದುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ | ಸಮಸ್ಯೆ ಇತ್ಯರ್ಥಕ್ಕೆ ಸಚಿವರಿಂದ ಖುದ್ದು ಸೂಚನೆ

ಕಣ್ಕಿ ಬೇಳೂರು ಸರ್ಕಾರಿ ಶಾಲೆಯ ಸಮಸ್ಯೆ| ಮಾಹಿತಿ ಪಡೆದುಕೊಂಡ ಶಿಕ್ಷಣ ಸಚಿವ ಮಧು ಬಂಗಾರಪ್ಪ | ಸಮಸ್ಯೆ ಇತ್ಯರ್ಥಕ್ಕೆ ಸಚಿವರಿಂದ ಖುದ್ದು ಸೂಚನೆ

ಹೊಸನಗರ: ತಾಲೂಕಿನ ಕಣ್ಕಿ ಬೇಳೂರು ಸರ್ಕಾರಿ ಶಾಲೆಯ ಸಮಸ್ಯೆ ಮತ್ತು ಗೇಟ್ ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಸುದ್ದಿ ಹೊರಬರುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ಪಡೆದುಕೊಂಡು ಸಮಸ್ಯೆ ಇತ್ಯರ್ಥಕ್ಕೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

ಇಂದು ಬೆಳಿಗ್ಗೆ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಬೇಕಾಬಿಟ್ಟಿ ವರ್ಗಾವಣೆ, ನೇಮಕ ಮತ್ತು ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಒಳಗಿರುವಾಗಲೇ ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಮಾತ್ರವಲ್ಲ.. ಬಿಇಒ ಬರೋವರೆಗೂ ಗೇಟ್ ಒಪನ್ ಮಾಡಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ಸುದ್ದಿ ಗುಡ್ ಮಾರ್ನಿಂಗ್ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಸಚಿವ ಮಧು ಬಂಗಾರಪ್ಪ ಗಮನಕ್ಕೆ ಹೋಗಿದೆ. ಮಾಹಿತಿ ಪಡೆದುಕೊಂಡ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದಾರೆ.
ಬಳಿಕ ಬೇಳೂರಿಗೆ ಭೇಟಿ ನೀಡಿದ ಬಿಇಒ ಹೆಚ್.ಆರ್.ಕೃಷ್ಣಮೂರ್ತಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ತುರ್ತು ಪರಿಹಾರ ಸೂಚಿಸಿ ಗ್ರಾಮಸ್ಥರ ಪ್ರತಿಭಟನೆ ಕೈಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version