
ಹೊಸನಗರ: ನಮ್ಮ ಮನೆಯಲ್ಲಿ ಸಾವು ನಡೆದಿದೆ. ಮನೆಮಗ ಬಂದೂಕಿನ ಗುಂಡಿಗೆ ಬಲಿಯಾಗಿದ್ದಾನೆ. ಊರಲ್ಲೆ ಇದ್ದ ಗೃಹ ಸಚಿವರು ವಿಷಯ ತಿಳಿದರೂ ಮನೆಗೆ ಬರಲಿಲ್ಲ. ಒಂದು ಸಾಂತ್ವನದ ಮಾತು ಹೇಳುವ ಸೌಜನ್ಯವನ್ನು ತೋರಲಿಲ್ಲ ಎಂದು ಗೃಹ ಸಚಿವ ಆರಗಜ್ಞಾನೇಂದ್ರರ ಕುರಿತಾಗಿ ತಾಲ್ಲೂಕಿನ ನೇಗಿಲೋಣಿಯ ದುಖಃತಪ್ತ ಕುಟುಂಬ ಆರೋಪಿಸಿದೆ.
ತಾಲ್ಲೂಕಿನ ನೇಗಿಲೋಣಿ ಕಾಡಿನಲ್ಲಿ ಶಿಕಾರಿಗೆ ಹೋದ ವೇಳೆ ಬಂದೂಕಿನ ಗುಂಡು ಹಾರಿ ಸಾವನ್ನಪ್ಪಿದ ಅಂಬರೀಶ್‌ಅವರ ಮನೆಗೆ ಗುರುವಾರ ಮಾಜಿ ಸಚಿವ ಕಿಮ್ಮನೆರತ್ನಾಕರ್ ಬೇಟಿ ನೀಡಿದ ಸಂರ‍್ಭದಲ್ಲಿ ಕುಟುಂಬ ರ‍್ಗವು ಗೃಹ ಸಚಿವ ಆರಗಜ್ಞಾನೇಂದ್ರ ಅವರ ಮೇಲೆ ಆರೋಪದ ಸುರಿಮಳೆ ಗೈದಿದೆ.
ಅಂಬರೀಶ ಸಾವಿನಿಂದ ಇಡೀ ಊರೇ ದುಃಖದಲ್ಲಿತ್ತು. ಅಂದೆ ನಮ್ಮ ಊರು ಅಂಡಗದೂದೂರಿಗೆ ಬಂದಿದ್ದ ಗೃಹ ಸಚಿವರು ವಿಷಯ ತಿಳಿದಿದ್ದರೂ ನಮ್ಮ ಮನೆಗೆ ಬರಲಿಲ್ಲ. ಮಂತ್ರಿಯಾಗಿರುವ ಜ್ಞಾನೇಂದ್ರ ಮನೆಗೆ ಬಂದು ಏನಾಯಿತು ಎಂದು ಕೇಳುವ ಔಚಿತ್ಯವನ್ನು ತೋರಲಿಲ್ಲ. ಒಂದು ಮಾತಿನ ಸಾಂತ್ವನವನ್ನು ಹೇಳದೆ ಹೋದರು. ಇದು ನಮಗೆ ಬೇಸರ ತರಿಸಿದೆ ಎಂದು ಅಂಬರೀಶನ ಅಕ್ಕ ಸಿ. ಅಮಿತ ನೋವಿನಲ್ಲಿ ನುಡಿದರು.
ಸಾವಿನಲ್ಲಿ ಅನುಮಾನವಿದೆ:
ಕಾಡಿಗೆ ಬೇಟೆಗೆಂದು ಅಣ್ಣನ ಜತೆ ಹೋಗಿದ್ದ ಕೀರ್ತಿ ನಡವಳಿಕೆ ಬಗ್ಗೆ ನಮಗೆ ಅನುಮಾನವಿದೆ. ಗೆಳೆಯ ಕೀರ್ತಿ ಸಾವು ಸಂಭವಿಸಿದ ನಂತರ ನಮ್ಮ ಸಂಪರ್ಕದಲ್ಲಿ ಇರದೇ ಪಲಾಯನ ಮಾಡಿದ್ದು ನಮಗೆ ಬಲವಾದ ಸಂಶಯ ಮೂಡಿಸಿದೆ ಎಂದು ಅಂಬರೀಶ ಕುಟುಂಬ ಬಲವಾಗಿ ಆರೋಪಿಸುತ್ತಿದೆ. ಕೀರ್ತಿ ಮತ್ತು ಅವರ ಮನೆಯವರು ಯಾರು ನಮ್ಮ ಮನೆಗೆ ಬರಲಿಲ್ಲ. ಶವ ಸಂಸ್ಕಾರಕ್ಕೂ ಬರಲಿಲ್ಲ. ನಮಗೆ ಹಣದ ಆಮಿಷ ತೋರಲಾಗಿದೆ. ಸಾವಿಗೆ ಕಾರಣ ತಿಳಿಯಬೇಕಾಗಿದೆ. ಸಾವಿಗೆ ನ್ಯಾಯ ಒದಗಿಸಬೇಕಾಗಿದೆ. ಎಂದು ಆಗ್ರಹಿಸಿದೆ ಆ ನೊಂದ ಕುಟುಂಬ.
ರಕ್ತದ ಗುರುತುಇರಲಿಲ್ಲ:
ಅAದು ಸಾಯಂಕಾಲ ಮನೆಗೆ ಬಂದ ಕೀರ್ತಿ ಅಣ್ಣ ಅಂಬರೀಶನನ್ನು ಕರೆದುಕೊಂಡು ಕಾಡಿಗೆ ಹೋಗಿದ್ದಾನೆ. ನಂತರ ಕಾಡಿನಲ್ಲಿ ಗುಂಡಿನ ಸದ್ದು ಕೇಳಿದೆ. ಆದರೆ ಎಷ್ಟು ಹೋತ್ತಾದರೂ ಅಣ್ಣ ಮನೆಗೆ ಬಂದಿಲ್ಲ. ಕೀರ್ತಿ ಮನೆಯಲ್ಲಿ ಕೇಳಿದಾಗ ‘ಆಗಲೆ ಮನೆಗೆ ಹೋದ’ ಎಂದು ಹೇಳಿದ್ದಾರೆ. ನಂತರ ಬೆಳಿಗ್ಗೆ ಅಣ್ಣನ ಸುಳಿವು ಸಿಗದಿದ್ದಾಗ ನಾವೆಲ್ಲರೂ ಕಾಡಿನಲ್ಲಿ ಹುಡುಕಿದ್ದೇವೆ. ಬಂಡೆಗಲ್ಲಿನ ಮೇಲೆ ಅಣ್ಣನ ಶವ ಬಿದ್ದಿತ್ತು. ಎದೆಯಲ್ಲಿ ಗುಂಡು ಒಳಹೊಕ್ಕ ಗಾಯವಿತ್ತು. ಆದರೆ ಸ್ಥಳದಲ್ಲಿ ರಕ್ತದ ಗುರುತು ಇರಲಿಲ್ಲ. ಒದ್ದಾಡಿದ ಕುರುಹು ಇರಲಿಲ್ಲ. ಇದು ಸಾವಿನ ಬಗ್ಗೆ ಸಹಜವಾಗೇ ಸಂಶಯ ತಂದಿದೆ ಎಂದು ಅಂಬರೀಶನ ಸಹೋದರ ಅಬಿಷೇಕ ಆರೋಪಿಸಿದ್ದಾರೆ.
ಸಾಂತ್ವನ ಹೇಳಲು ಏನು ಸಮಸ್ಯೆಯಾಗಿತ್ತು:
ನೇಗಿಲೋಣಿ ಸಿದ್ದನಾಯ್ಕ್ ಕುಟುಂಬದಲ್ಲಿ ಗುಂಡಿನೇಟಿಗೆ ಅಂಬರೀಷ ಸಾವನ್ನಪಿದ್ದಾರೆ. ಅಂದು ಗೃಹ ಸಚಿವರು ಅಂಡದದೋದೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವರಾದ ಅವರಿಗೆ ಮಾಹಿತಿ ಇರಲೇ ಬೇಕು. ಆದರೂ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಏನು ಸಮಸ್ಯೆ ಇದ್ದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಶ್ನಿಸಿದ್ದಾರೆ.
ಮೃತ ವ್ಯಕ್ತಿಯ ಕುಟುಂಬ ಅನೇಕ ಆರೋಪಗಳನ್ನು ಮಾಡುತ್ತಿದೆ. ಈ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ಮೃತ ಕುಟುಂದವರ ಯಾವುದೇ ನಿರ್ಧಾರ ಕೈಗೊಂಡರು ನಮ್ಮ ಸಹಮತವಿದೆ. ಇದರಲ್ಲಿ ರಾಜಕೀಯ ಬೇಡ. ನಾನು ಸಾಂತ್ವನ ಹೇಳಲು ಬಂದಿದ್ದೇನೆ. ಆದರೆ ಗೃಹಸಚಿವರಾದಿಯಾಗಿ ಜಿಪಂ, ತಾಪಂನಲ್ಲಿ ಆರಿಸಿ ಹೋದ ಜನಪ್ರತಿನಿಧಿಗಳು ಯಾರು ಮೃತ ಕುಟುಂಬದ ಮನೆಗೆ ಭೇಟಿ ನೀಡದೆ ಅವರೇ ಅನುಮಾನ ಹುಟ್ಟು ಹಾಕುತ್ತಿದ್ದಾರೆ ಎಂದು ಕಿಮ್ಮನೆ ಆರೋಪಿಸಿದರು.
ಈ ವೇಳೆ ಎಸ್.ಎನ್.ಜಿ ಜಿಲ್ಲಾಧ್ಯಕ್ಷ ಟೆಂಕಬೈಲು ಲೋಕೇಶ್, ಎಸ್.ಎನ್.ಜಿ ಉಪಾಧ್ಯಕ್ಷ ವಿಶಾಲ ಕುಮಾರ್, ಅಮ್ರಪಾಲಿ ಸುರೇಶ್, ನಂದೀಶ್, ಹೊದಲ ಶಿವು, ಬಂಡಿ ರಾಮಚಂದ್ರ, ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಬಿ.ಜಿ. ಚಂದ್ರಮೌಳಿ, ಏರಗಿ ಉಮೇಶ್, ಅಮರನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ರ‍್ಯಾವೆ ದೇವೇಂದ್ರ, ಕಾನಬೈಲು ರಾಘವೇಂದ್ರ, ದೋದೂರು ವಸಂತ ಶೇಖರಪ್ಪ ಇದ್ದರು.