ಸಾಲಬಾಧೆ | ನರ್ತಿಗೆ ವಾಸಿ ರೈತ ಆತ್ಮಹತ್ಯೆ | ರೂ.6.5 ಲಕ್ಷ ಸಾಲ ಮಾಡಿಕೊಂಡಿದ್ದ ರೈತ

ಸಾಲಬಾಧೆ: ಮುಂಡಳ್ಳಿ, ನರ್ತಿಗೆ ರೈತ ಆತ್ಮಹತ್ಯೆ

ನರ್ತಿಗೆ ನಿವಾಸಿ ತಿಮ್ಮಪ್ಪ ಎನ್.ಟಿ (52) ಮೃತ ರೈತನಾಗಿದ್ದಾನೆ.
ಬಾಗಾಯ್ತು ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದು ಅಲ್ಲಿ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಾಂತಿ ಮಾಡಿಕೊಳ್ಳುತ್ತಿದ್ದಾಗ ಮನೆಯವರು ವಿಚಾರಿಸಲು ಮುಂದಾದಾಗ ವಿಷದ ವಾಸನೆ ಬಂದಿದೆ. ಚಿಕಿತ್ಸೆ ಕೊಡಿಸಲು ಮುಂದಾದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದಾನೆ.

ರೂ.6.5 ಲಕ್ಷ ಸಾಲ:
ಮೃತ ರೈತ ತಿಮ್ಮಪ್ಪ 1.25 ಎಕರೆ ತರಿ ಭೂಮಿ, 2 ಎಕರೆ ಬಗರಹುಕುಂ ಜಮೀನಿನಲ್ಲಿ ಬಾಗಾಯ್ತು ಮಾಡಿಕೊಂಡಿದ್ದ. ಕೃಷಿಗಾಗಿ ಧರ್ಮಸ್ಥಳ ಸಂಘ, ನಗರ ನೀಲಕಂಠೇಶ್ವರ ಸಹಕಾರ ಬ್ಯಾಂಕ್, ಜಯನಗರ ಉಜ್ಜೀವನ್ ಫೈನಾನ್ಸ್, ರಿಪ್ಪನಪೇಟೆ ಚೈತನ್ಯ ಗ್ರಾಮೀಣ ಬ್ಯಾಂಕ್, ಮೂಕಾಂಬಿಕ ಸ್ವಸಹಾಯ ಸಂಘ ಸೇರಿ, ತನ್ನ ಹಾಗು ಪತ್ನಿ ಹೆಸರಲ್ಲಿ ರೂ.6.5 ಲಕ್ಷ ಸಾಲ ಮಾಡಿಕೊಂಡಿದ್ದ. ಕೃಷಿಯಲ್ಲಿ ಹೆಚ್ಚಿನ ಆದಾಯ ಬಾರದ ಕಾರಣ, ಸಾಲಬಾಧೆಗೆ ತುತ್ತಾಗಿದ್ದು ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ತಿಮ್ಮಪ್ಪ ಪುತ್ರ ಅಮಿತ್ ಎನ್.ಟಿ ದೂರು ನೀಡಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಶಿವಾನಂದ ಕೋಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version