
ಹೊಸನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಹೊಸತನದ ವಿಶೇಷದೊಂದಿಗೆ ಕಾರ್ಯಕ್ರಮಗಳ ಸಿದ್ದತೆ ನಡೆಯುತ್ತಿದೆ. ಈ ನಡುವೆ ಸರ್ಕಾರಿ ಪ್ರೌಢಶಾಲೆಯೊಂದು ನಿರ್ಮಿಸಿರುವ ಮುಖಮಂಟಪ ಗಮನಸೆಳೆಯುತ್ತಿದೆ.
ಹೌದು ಚಿತ್ತದಲ್ಲಿ ಕಾಣುತ್ತಿರುವುದು ತಾಲೂಕಿನ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಗೆ ಸಾಗುವ ದಾರಿಯಲ್ಲಿ ನಿರ್ಮಾಣಗೊಂಡ ಮುಖಮಂಟಪ. ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಈ ಮುಖ್ಯಧ್ವಾರ ನಿರ್ಮಿಸಿ ಸ್ವಾತಂತ್ರ್ಯೋತ್ಸವಕ್ಕೆ ಸ್ವಾಗತ ಕೋರಲಾಗುತ್ತಿದೆ.
ಶಿಕ್ಷಕರು ಮತ್ತು ಮಕ್ಕಳ ಕಲಾತ್ಮಕತೆ ಮತ್ತು ಶ್ರಮದೊಂದಿಗೆ ಜನಪದ ಸಂಸ್ಕೃತಿ ಬಿಂಬಿಸುವ ಎತ್ತಿನಗಾಡಿ ಚಕ್ರ ಮತ್ತು ಪ್ಲಾಸ್ಟಿಕ್ ಮುಕ್ತ ಮುಖಮಂಟಪ ನಿರ್ಮಿಸಿರುವುದು ಗಮನಸೆಳೆಯುತ್ತಿದೆ.
ಈಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಅಮೃತ ವರ್ಷದ ಮೆರುಗು. ಹೀಗಾಗಿ ಶಾಲೆಯನ್ನು ವಿಶೇಷವಾಗಿ ಸಿಂಗರಿಸಿ ಕಾರ್ಯಕ್ರಮ ರೂಪಿಸಲಾಗಿದೆ.
– ಡಾ.ಸುಧಾಕರ್ ಮುಖ್ಯ ಶಿಕ್ಷಕ