
ಪುರಾಣ, ಇತಿಹಾಸದಲ್ಲಿ ಮಹತ್ವ ಸಾರುವ ಸವಿತಾ ಸಮಾಜ |ಸವಿತಾ ಮಹರ್ಷಿ ಜಯಂತಿ ಆಚರಣೆ ಮೌಲ್ಯಯುತ | ತಾಲೂಕು ಸವಿತಾ ಸಮಾಜ ಕಾರ್ಯದರ್ಶಿ ಎನ್.ಎಮ್.ರಾಘವೇಂದ್ರ
ಹೊಸನಗರ: ರಥಸಪ್ತಮಿ ಋತುಮಾನದ ಹಬ್ಬ. ಸೂರ್ಯದೇವ ಸಾಕ್ಷಾತ್ ಶ್ರೀಮನ್ನಾರಾಯಣನ ಪ್ರತಿರೂಪ. ಈ ದಿನಂದು ಸೂರ್ಯನಾರಾಯಣ ಉಪಾಸಕರಿಗೆ ಸವಿತಾ ಜನರೆಂದು ಕರೆಯುತ್ತಾರೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ ಎಂದು ಹೊಸನಗರ ತಾಲೂಕು ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಎನ್.ರಾಘವೇಂದ್ರ ಹೇಳಿದರು.
ತಾಲೂಕು ಕಚೇರಿಯಲ್ಲಿ ಹೊಸನಗರ ತಾಲೂಕು ಆಡಳಿತ ಮತ್ತು ಹೊಸನಗರ ತಾಲೂಕು ಸವಿತಾ ಸಮಾಜದ ಸಹಯೋಗದೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಶ್ರೀ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸವಿತಾ ಮಹರ್ಷಿ ಜಯಂತಿ ಬಗ್ಗೆ ಮಾಹಿತಿ ನೀಡಿದರು.
ಸವಿತಾ ಸಮಾಜದವರು ಕುಲಕಸುಬು ಮಾತ್ರವಲ್ಲದೇ ಸಂಗೀತ, ವೈದ್ಯ, ಜ್ಯೋತಿಷ್ಯ, ಪೌರೋಹಿತ್ಯವನ್ನು ಕೂಡ ಬಲ್ಲವರಾಗಿದ್ದರು ಎಂಬುದನ್ನು ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ.
ಸವಿತಾ ಸಮಾಜದವರ ಬದುಕು ಹೋರಾಟದ ಬಗ್ಗೆ ಅರಿಯಲು ರಾಷ್ಟ್ರಕೂಟರ ಕಲಾ ಶಾಸನ, ವಿಜಯನಗರದ ಕಲಾಶಾಸನ, ಕಲ್ಯಾಣ ಚಾಲುಕ್ಯರ ಕಾಲದ ಶಾಸನ ಅಧ್ಯಯನ ಮಾಡ ಬಹುದು ಎಂದರು.
ಜಯಂತಿ ಆಚರಣೆ:
ಸವಿತಾ ಸಮಾಜ ಬಂದುಗಳ ಸಮ್ಮುಖದಲ್ಲಿ ತಾಲೂಕು ತಹಶೀಲ್ದಾರ್ ರಶ್ಮೀ ಹಾಲೇಶ್, ಮತ್ತು ತಾಲೂಕು ಸವಿತಾ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಸಮಾಜದ ಅಧ್ಯಕ್ಷರಾದ ಬಾಬುರಾವ್ ಹೊಸನಗರ, ಸಮಾಜದ ಇಂದಿನ ಸ್ಥಿತಿಗತಿಯ ಬಗ್ಗೆ ವಿವರಿಸಿದರು, ತಾಲೂಕು ಸವಿತಾ ಸಮಾಜದ ಕಾರ್ಯದರ್ಶಿ ಸುಕೇಶ್ ಸಂಘಟನೆಯನ್ನು ಮತ್ತಷ್ಟು ಬಲ ಪಡಿಸಿಕೊಳ್ಳುವ ಬಗ್ಗೆ ತಿಳಿಸಿದರು,
ತಾಲೂಕು ಸವಿತಾ ಸಮಾಜದ ಖಜಾಂಚಿ ಹಾಗೂ ಶ್ರೀ ನಾಗೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಶ ಮಂಜುನಾಥ್ ಎಂ ಭಂಡಾರಿ, ಸರ್ಕಾರದ ನಿರ್ದೇಶನದಂತೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣ ಗೊಳಿಸಲು ತಾಲೂಕ ಆಡಳಿತವು ಕನಿಷ್ಠ ಒಂದು ವಾರದ ಮೊದಲು ತಾಲೂಕು ಸಮಿತಿಯವರಿಗೆ ತಿಳಿಸಬೇಕು. ಸಮಾಜದ ಹೆಸರಿಗೆ ತಮ್ಮ ವಿವೇಚನೆಯಲ್ಲಿ ಎಸ್ಟು ಸಾಧ್ಯವೂ ಅಷ್ಟು ಸರ್ಕಾರದ ನಿವೇಶನ ಮಂಜೂರು ಮಾಡುವಂತೆ ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು,
ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಮತ್ತು ಸವಿತಾ ಬಂಧುಗಳು ಹೊಸನಗರ ತಾಲೂಕು ಸವಿತಾ ಸಮಾಜಕ್ಕೆ ಸಮಾಜ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತಾಡಿದ ತಹಶೀಲ್ದಾರ್ ರವರು ಸಾಧಕ, ಬಾದಕದ ಬಗ್ಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು,
ಸಭೆಯಲ್ಲಿ ತಾಲೂಕಿನ ವಿವಿಧ ಘಟಕಗಳ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು, ಮತ್ತು ಶ್ರೀ ನಾಗೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರು, ಪ್ರಮುಖರಾದ ಧರ್ಮರಾಜ್ ಭಂಡಾರಿ, ಮಂಜಣ್ಣ ಕಲ್ಲೋಡಿ, ಮಂಜುನಾಥ ಕಚ್ಚಿಗೆಬೈಲು, ರಾಘವೇಂದ್ರ ಬಾಣಿಗ, ಕೌಶಿಕ್, ಲಿಂಗರಾಜ್, ಶ್ರೀನಿವಾಸ ಸಿ.ಎಂ, ಉಮೇಶ ಸೊನಲೆ, ಬಾಲಕೃಷ್ಣ ಬಾಣಿಗ, ಯತಿರಾಜ್, ಕೃಷ್ಣಮೂರ್ತಿ, ಮನೋಜ್, ಸುಮಂತ್, ಮಂಜುನಾಥ ರಿಪ್ಪನಪೇಟೆ, ರಮೇಶ ಬಾಣಿಗ, ಸವಿತಾ ಸಮಾಜದ ಬಂಧುಗಳು ಭಾಗವಹಿಸಿದ್ದರು.