ರಸ್ತೆ ಅಪಘಾತಕ್ಕೆ ಸ್ಪಂದಿಸಿದ ಶಾಸಕ

Hosnagar, MLA, Harthalu Halappa,

ಹೊಸನಗರ: ಬೈಕ್ ಅಪಘಾತ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಾಸಕರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಕರಿಸಿ ಸ್ಪಂಧಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಬೈಕ್ ನಲ್ಲಿ ಹೊಸನಗರಕ್ಕೆ ಬರುತ್ತಿದ್ದ ಗರ್ತಿಕೆರೆ ನಿವಾಸಿ ಮಾವಿನಕೊಪ್ಪದ ಕೊಡಚಾದ್ರಿ ಕಾಲೇಜ್ ಬಳಿ ಎಮ್ಮೆ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ವೇಖೆ ಬೈಕ್ ಸವಾರ ರಾಘವೇಂದ್ರ ಗಾಯಗೊಂಡಿದ್ದಾನೆ. ಇದೇ ವೇಳೆ ವರಕೋಡು ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ಶಾಸಕ ಹರತಾಳು ಹಾಲಪ್ಪ ದೌಡಾಯಿಸಿ ಕೂಡಲೇ ಗಾಯಾಳುವನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version