
ಹೊಸನಗರ: ನಗರ ಹೋಬಳಿಯಲ್ಲಿ ಕಳೆದ 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಕಾರಣ ಹುಲಿಕಲ್ ಫಾಲ್ಸ್ ಮತ್ತು ಸಾವೇಹಕ್ಲು ಡ್ಯಾಂ ಮೈದುಂಬಿಕೊಂಡಿದ್ದು ಪ್ರವಾಸಿಗರು ಮುಗಿ ಬಿದ್ದಿದ್ದಾರೆ.
ಜುಲೈ ಎರಡನೇ ಮತ್ತು ಮೂರನೇ ವಾರ ಹುಲಿಕಲ್ ಫಾಲ್ಸ್ ಗೆ ಸಹಸ್ರಾರು ಪ್ರವಾಸಿಗರು ದೌಡಾಯಿಸಿದ್ದು, ಪ್ರತಿದಿನ ನೋಡುಗರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು.. ಅದರಲ್ಲೂ ವೀಕೆಂಡ್ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ತುಂಬಿತುಳುಕುತ್ತಿದ್ದು ಘಾಟ್ ಸಂಚಾರ ದಲ್ಲಿ ವ್ಯತ್ಯಯ ಕೂಡ ಕಂಡುಬಂದ ವರದಿಯಾಗಿತ್ತು.
ಸಾವೇಹಕ್ಲಿಗೆ ಪ್ರವಾಸಿಗರ ದಂಡು;
582 ಮೀ ಗರೀಷ್ಠ ಮಟ್ಟದ ಸಾವೇಹಕ್ಲು ಜಲಾಶಯ ಭರ್ತಿಗೊಂಡು ಜು.13 ರಂದು ಓವರ್ ಫ್ಲೋ ಕಂಡುಬಂದಿದ್ದು ಅದನ್ನು ಕಣ್ತುಂಬಿ ಕೊಳ್ಳಲು ಸಹಸ್ರಾರು ಪ್ರವಾಸಿಗರು ಮುಗಿ ಬಿದ್ದಿದ್ದರು..ಓವರ್ ಫ್ಲೋ ಕಂಡು ವೀಕೆಂಡ್ ಶನಿವಾರ ಭಾನುವಾರ ನಿರೀಕ್ಷೆಗೂ ಮೀರಿ ಜನರು ಸಾವೇಹಕ್ಲು ಜಲಾಶಯಕ್ಕೆ ದೌಡಾಯಿಸಿದ್ದರು. ಎರಡು ದಿನದಲ್ಲಿ 3 ಸಾವಿರಕ್ಕಿಂತಲೂ ಹೆಚ್ಚು ವಾಹನಗಳು ಸಾವೇಹಕ್ಲು ಮಾರ್ಗದಲ್ಲಿ ಸಂಚರಿಸಿದ್ದು, 20 ಸಾವಿರಕ್ಕು ಹೆಚ್ಚು ಜನ ವೀಕ್ಷಣೆ ಮಾಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಪಾಸ್ ತೆಗೆದುಕೊಳ್ಳಿ: ಜಲಾಶಯವನ್ನು ಮೇಲ್ಭಾಗದಿಂದ ನೋಡಲು ತೊಂದರೆಯಿಲ್ಲ. ಆದರೆ ಕೆಳಭಾಗಕ್ಕೆ ಹೋಗಲು ಪಾಸ್ ಬೇಕು. ಮಾಸ್ತಿಕಟ್ಟೆ ಕೆಪಿಸಿ ಕಚೇರಿಯಲ್ಲಿ ಪಾಸ್ ನೀಡುತ್ತಿದ್ದು ಪಾಸ್ ಪಡೆದುಕೊಂಡು ಜಲಾಶಯ ಮತ್ತು ಓವರ್ ಫ್ಲೋ ಸೊಬಗನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
Read About: DINA BHAVISHYA updates daily