
ಹೊಸನಗರ: ಅಡಿಕೆಗೆ ಎಲೆಚುಕ್ಕೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಕಿಳಂದೂರು ಮೃತ ಕೃಷ್ಣಪ್ಪ ಗೌಡ ಜಮೀನಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಗುಡ್ ಮಾರ್ನಿಂಗ್ ಕರ್ನಾಟಕ.ಕಾಂ ನಲ್ಲಿ ಎಲೆಚುಕ್ಕೆ ರೋಗ ಬಾಧೆ, ಮಲೆನಾಡಲ್ಲಿ ಮೊದಲ ಬಲಿ ಸುದ್ದಿ ಪ್ರಕಟ ಆಗುತ್ತಿದ್ದಂತೆ ಕೃಷಿ ಅಧಿಕಾರಿಗಳು ದೌಡಾಯಿಸಿದ್ದಾರೆ.
ಕರಿಮನೆ ಗ್ರಾಪಂ ವ್ಯಾಪ್ತಿಯ ಕಿಳಂದೂರು ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿಗಳಾದ ಶರಣಪ್ಪ, ವಾಸುಕಿ ತಂಡ ಮೃತರ ಕುಟುಂಬದಿಂದ ಮಾಹಿತಿ ಪಡೆದರು.
ಬಳಿಕ ಕೃಷಿ ಜಮೀನಿಗೆ ಭೇಟಿಕೊಟ್ಟು ಬೆಳೆಹಾನಿಯನ್ನು ಅವಲೋಕಿಸಿದರು. ಬಳಿಕ ಮಾತನಾಡಿ ಕೃಷಿ ಅಧಿಕಾರಿ ಶರಣಪ್ಪ, ಈಗಾಗಲೇ ಕೃಷಿ ಜಮೀನನ್ನು ಪರಿಶೀಲಿಸಲಾಗಿದ್ದು, ಮಹಜರು ನಡೆಸಲಾಗಿದೆ. ಈ ಸಂಬಂಧ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗುವುದು ಎಂದರು.
ಈ ವೇಳೆ ಮೃತ ಕೃಷ್ಣಪ್ಪ ಗೌಡರ ಕುಟುಂಬವರ್ಗ, ಸಂಬಂಧಿಕರು ಮತ್ತು ಸ್ಥಳೀಯರು ಹಾಜರಿದ್ದರು.