
ನೂಲಿಗ್ಗೇರಿ ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಪರಿಕರ ಒದಗಿಸಲು ಕೆನರಾಬ್ಯಾಂಕ್‌ಗೆ ಮನವಿ
ಹೊಸನಗರ: ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಕ್ಕು ಹೆಚ್ಚು ವಿದ್ಯಾರ್ಥಿಗಳಿದ್ದು ಸ್ಮಾರ್ಟ್ ಕ್ಲಾಸ್ ನಡೆಸಲು ಅಗತ್ಯ ಸೌಲಭ್ಯ ಒದಗಿಸುವಂತೆ ರಾಜೇಶ್ ಹಿರಿಮನೆ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಕೆನರಾಬ್ಯಾಂಕ್‌ಗೆ ಮನವಿ ಮಾಡಿದೆ.
ತಾಲೂಕಿನಲ್ಲಿ ಹೆಚ್ಚಿನ ರೈತ, ಬಡ ಕೂಲಿಕಾರ್ಮಿಕರ ಮಕ್ಕಳನ್ನು ಹೊಂದಿರುವ ನೂಲಿಗ್ಗೇರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸಲು, ಪ್ರೊಜೆಕ್ಟರ್, ಕಂಪ್ಯೂಟರ್ಸ್ ಮತ್ತು ಸ್ಮಾರ್ಟ್ ಟಿವಿ ಒದಗಿಸುವಂತೆ ನಗರ ಕೆನರಾ ಬ್ಯಾಂಕ್ ಮ್ಯಾನೇಜರ್ ನಿತಿನ್ ಎಂ.ಜಿ.ರಿಗೆ ಮನವಿ ಸಲ್ಲಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ ಹಿರಿಮನೆ, ಶಿಕ್ಷಕ ಆಶಿಕ್, ವೆಂಕಟೇಶ ಭಟ್, ದೇವರಾಜ ಭಂಡಾರಿ ಇದ್ದರು.
