ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ

ಸರ್ವರ ಸಹಕಾರದಿಂದ ಸರ್ಕಾರಿ ಶಾಲೆಯ ಅಭಿವೃದ್ಧಿ : ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಆರಗ ಆಪ್ತ ಸಹಾಯಕ ರಾಜೇಶ ಹಿರೀಮನೆ

ಹೊಸನಗರ: ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಶಾಸಕ ಆರಗ ಆಪ್ತ ಸಹಾಯಕ, ಶಾಲಾಭಿವೃದ್ಧಿ ಸಮಿತಿ ನೂತನ ಅಧ್ಯಕ್ಷ ರಾಜೇಶ್ ಹಿರೀಮನೆ ಹೇಳಿದರು.

ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಮಾತನಾಡಿದರು.
ಸರ್ಕಾರಿ ಶಾಲೆಗೆ ಮಕ್ಕಳು ಬರುವುದು ಕಡಿಮೆ ಆದರೆ ನೂಲಿಗ್ಗೇರಿ ಶಾಲೆಯಲ್ಲಿ 100 ಮಕ್ಕಳು ಇದ್ದು ಉತ್ತಮ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ ಎಂದರು.
ನಿಕಟಪೂರ್ವ ಅಧ್ಯಕ್ಷ ದೇವಪ್ಪ, ಸದರಿ ಶಾಲೆಯಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿ ಕೂಡ ಆರಂಭವಾಗಿದೆ. ಅಲ್ಲದೇ 60 ರ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಶಿಕ್ಷಕ ವೃಂದ, ಹಳೇ ವಿದ್ಯಾರ್ಥಿಗಳು, ಗೆಳೆಯರ ಬಳಗ, ಪೋಷಕರ ಸಹಕಾರವೇ ಇದಕ್ಕೆ ಕಾರಣ ಎಂದರು.
ಇದೇ ವೇಳೆ ನಿರ್ಗಮಿತ ಅಧ್ಯಕ್ಷ ದೇವಪ್ಪ, ಉಪಾಧ್ಯಕ್ಷೆ ಅನ್ನಪೂರ್ಣ ಮತ್ತು ಕಳೆದ ಅವಧಿಯ ಸದಸ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯೋಜನೆಯಿಂದ ಸಂಸದ ಬಿ.ವೈ.ರಾಘವೇಂದ್ರ ಕೊಡಮಾಡಿದ ಸ್ವೆಟರ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದೇ ವೇಳೆ ಶಾಲಾ ಸಂಸತ್ ರಚಿಸಲಾಗಿದ್ದು ಮುಖ್ಯಮಂತ್ರಿಯಾಗಿ ಅನೀಶ್, ಉಪಮುಖ್ಯಮಂತ್ರಿಯಾಗಿ ಸಂಜನಾ ಆಯ್ಕೆಯಾದರು.

ಶಾಲಾಭಿವೃದ್ಧಿ ಸಮಿತಿ ನೂತನ ಉಪಾಧ್ಯಕ್ಷೆ ರಮ್ಯ ದಿನೇಶ ಕೊಟಾರಿ, ಗ್ರಾಪಂ ಸದಸ್ಯ ಎಂ.ವಿಶ್ವನಾಥ್, ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ವೆಂಕಟೇಶ ಭಟ್, ಮುಖ್ಯ ಶಿಕ್ಷಕಿ ಪ್ರಮೀಳಾ, ಶಿಕ್ಷಕರಾದ ಆಶಿಕ್, ಫರೀದಾ, ಜ್ಯೋತಿ, ಮೀನಾಕ್ಷಿ, ಪ್ರಮುಖರಾದ ಸಂತೋಷ ಚಿಕ್ಕಪೇಟೆ, ದತ್ತಾತ್ರೇಯ ರಾವ್, ಗಣೇಶ ರಾವ್, ರಾಘವೇಂದ್ರ, ಬಾಲಕೃಷ್ಣ, ಚಿದಂಬರ್, ಸವಿತಾ, ಕವಿತಾ, ಕಲ್ಪನಾ, ರಂಜಿತಾ, ಶ್ವೇತಾ, ರೇಷ್ಮಾಬಾನು, ಜಲಜ, ಅಡುಗೆ ಸಹಾಯಕಿಯರಾದ ಮೂಕಾಂಬಿಕ, ಸುಮಿತ್ರಾ ಪಾಲ್ಗೊಂಡಿದ್ದರು.

ನೂಲಿಗ್ಗೇರಿ ಶಾಲಾ ವಿದ್ಯಾರ್ಥಿಗಳಿಗೆ ಸಂಸದರ ಅನುದಾನದಲ್ಲಿ ನೀಡಿದ ಸ್ವೆಟರ್ ವಿತರಿಸಲಾಯಿತು.

Exit mobile version