ನೂಲಿಗ್ಗೇರಿ ದೀಪೋತ್ಸವ : ಭಕ್ತರಿಗೆ ಉಚಿತ ಕಬ್ಬಿನಹಾಲು ಸೇವೆ

ನೂಲಿಗ್ಗೇರಿ ದೀಪೋತ್ಸವ : ಭಕ್ತರಿಗೆ ಉಚಿತ ಕಬ್ಬಿನಹಾಲು ಸೇವೆ

ಹೊಸನಗರ: ಪ್ರತಿವರ್ಷದಂತೆ ಈ ವರ್ಷವೂ ಹೊಸನಗರ ತಾಲೂಕು ನೂಲಿಗ್ಗೇರಿ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ನೂಲಿಗ್ಗೇರಿ ಭೂತರಾಯ, ಚೌಡೇಶ್ವರಿ, ಶ್ರೀ ನಾಗ ಸನ್ನಿಧಿಯಲ್ಲಿ ಭಾನುವಾರ ಕಾರ್ತಿಕ ದೀಪೋತ್ಸವ ನೆರವೇರಿತು.
ಬೆಳಿಗ್ಗೆ ಸನ್ನಿಧಿಯಲ್ಲಿ ಮಹಾಗಣಪತಿ ದೇಗುಲದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನಾವುಡರ ನೇತೃತ್ಬದಲ್ಲಿ ಪೂಜಾಕಾರ್ಯಗಳು ನಡೆದವು. ರಾತ್ರಿ ಕಾರ್ತಿಕ ದೀಪೋತ್ಸವ ನಡೆಯಿತು.

ಕಬ್ಬಿನ ಹಾಲು ಸೇವೆ:
ಸ್ಥಳೀಯ ಅರುಣ ವಿಠಲ ಕುಟುಂಬದವರಿಂದ ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ವಿತರಿಸಿದ್ದು ಗಮನ ಸೆಳೆಯಿತು. ಸಂಜೆ .6 ಗಂಟೆಯಿಂದ ರಾತ್ರಿ 9ರವರೆಗೆ ಹಾಲು ವಿತರಣೆ ಮಾಡಲಾಯಿತು. ದೇವರಿಗೆ ವಿಶೇಷ ಮಂಗಳಾರತಿ, ಹಣ್ಣುಕಾಯಿ ಸೇವೆ ನಡೆಸಲಾಯಿತು.
ಆಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಸ್ಥಳೀಯರಾದ ಮುರುಗೇಶ್, ಹರೀಶ ವಕ್ರತುಂಡ, ಅಬುಬಕರ್, ಚಿನ್ನಮ್ಮ ಮಹಾದೇವ್, ಸಂದೇಶ, ಸುನಿಲ್, ವಿನಯ, ಅಶೋಕ್, ನಾಗೇಂದ್ರ, ಸುರೇಶ್, ಮಂಜುನಾಥ, ಚಂದ್ರಣ್ಣ, ರತ್ನಾಕರ ಹಂಝಾ, ವರುಣ್, ಮಹಾದೇವ್ ರಾಜು, ಗ್ರಾಮಸ್ಥರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

Exit mobile version