
ಶಿವಮೊಗ್ಗ: ಮಲೆನಾಡಲ್ಲಿ ಜುಲೈ ತಿಂಗಳ ಆರಂಭದಲ್ಲಿ ಕಂಡು ಮಳೆಯ ಅಬ್ಬರ ಒಂದೇ ಸಮನೆ ಕಡಿಮೆಯಾಗಿದೆ.
ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು ಕೆರೆ ಕೋಡಿಗಳು ತುಂಬಿ ಹರಿದಿತ್ತು. ಅಲ್ಲದೇ ಜಲಾಶಯ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಮೊದಲ ಮತ್ತು ಎರಡನೇ ವಾರದಲ್ಲಿ ಕಂಡು ಬಂದ ಮಳೆಯ ಅಬ್ಬರ ಈಗಿಲ್ಲ.
ಲಿಂಗನಮಕ್ಕಿ ಜಲಾಶಯದ ಮಟ್ಟ 1897 ಅಡಿ ತಲುಪಿದ್ದು ಒಳಹರಿವು ಕಡಿಮೆಯಾಗಿದೆ. ಶಿವಮೊಗ್ಗದ ಆಗುಂಬೆ, ಹುಲಿಕಲ್, ಭಾಗದಲ್ಲೂ ಮಳೆ ತನ್ನ ಬಿರುಸು ಕಳೆದುಕೊಂಡಿದೆ.