ಕಡುಬಡ ಕುಟುಂಬಗಳಿಗೆ ದಿನಸಿ‌ ಕಿಟ್ ವಿತರಣೆ | ರೆಡ್ ಕ್ರಾಸ್ ಸಂಸ್ಥೆಯ‌ ಕೊಡುಗೆ | ಕೆ.ಕೆ.ಅಶ್ವಿನಿಕುಮಾರ್

ಹೊಸನಗರ.ಆ.14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕಡು ಬಡ ಕುಟುಂಬಗಳನ್ನು ಗುರುತಿಸಿ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ತಾಲೂಕಿನ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಕೆ.ಕೆ.ಅಶ್ವಿನಿಕುಮಾರ್ ತಿಳಿಸಿದರು.
ತಾಲೂಕಿಗೆ 10 ಕಿಟ್ ಗಳು ಬಂದಿದ್ದು ಅರ್ಹ ಕುಟುಂಬಗಳುಗೆ ಆಧ್ಯತೆ ನೀಡಲಾಗಿದೆ. ಅಕ್ಕಿ ಹೊರತು ಪಡಿಸಿ ಒಂದು ಸಾವಿರ ಮೌಲ್ಯದ ದಿನಸಿ ವಸ್ತುಗಳು ಕಿಟ್ ನಲ್ಲಿದೆ ಎಂದರು.
ಅಮೃತ ಮಹೋತ್ಸವದ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ರೆಡ್ ಕ್ರಾಸ್ ಅಧ್ಯಕ್ಷ ತಹಶೀಲ್ದಾರ್ ವಿ.ಎಸ್.ರಾಜೀವ್ ಮಾರ್ಗದರ್ಶನದಲ್ಲಿ ವಿತರಣೆ ಮಾಡಲಾಗುತ್ತಿದ್ದು ಗೌರವ ಕಾರ್ಯದರ್ಶಿ ದೀಪಕ್ ತೇಳ್ಕರ್, ಕೆ.ಜಿ.ನಾಗೇಶ್, ನೂರಾ ಮೆಟಿಲ್ಡಾ ಸಿಕ್ವೇರಾ, ಸದಾಶಿವ ಶ್ರೇಷ್ಠಿ, ಮಾರ್ಷಲ್ ಶರಾಂ, ಗೌತಮ್ ಪಾಲ್ಗೊಂಡಿದ್ದರು.

Exit mobile version