ಬರೋಬ್ಬರಿ 20 ಗಂಟೆ ಭರ್ಜರಿ ಮೆರವಣಿಗೆ ಬಳಿಕ ರಿಪ್ಪನಪೇಟೆ ಹಿಂದೂ ಮಹಾಗಣಪತಿ ವಿಸರ್ಜನೆ | ಅಪಾರ ಜನಸ್ತೋಮ.. ವೈಭವದ ಮೆರವಣಿಗೆ

ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 55 ನೇ ವರ್ಷದ ಗಣೇಶೋತ್ಸವದ ಗಣಪತಿ ವಿಸರ್ಜನೆ 20 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಿದೆ.

55 ವರ್ಷಗಳ ಇತಿಹಾಸವಿರುವ ರಿಪ್ಪನ್ ಪೇಟೆ ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 20 ಗಂಟೆಗಳ ಕಾಲ ರಾಜಬೀದಿ ಉತ್ಸವ ಪ್ರಮುಖ ಬೀದಿಗಳಲ್ಲಿ ನಡೆಯಿತು ನಡೆಯಿತು. ನಿನ್ನೆ ಸಂಜೆ ಐದು ಗಂಟೆಗೆ ಆರಂಭವಾಗಿದ್ದ ಮೆರವಣಿಗೆ ಇಂದು ಮಧ್ಯಾಹ್ನ12.30 ಕ್ಕೆ ಜಲಸ್ಥಂಭನ ಕೊನೆಗೊಂಡು ವಿಸರ್ಜನೆ ನೆರವೇರಿತು.

ಗಣಪತಿ ಉತ್ಸವದ ರಾಜಬೀದಿ ಮೆರವಣಿಗೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಹಾಗೂ ಎಂ ಎಸ್ ಐ ಎಲ್ ಅಧ್ಯಕ್ಷ ಕ್ ಹರತಾಳು ಹಾಲಪ್ಪ, ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗಿಯಾದರು. ರಾಜ್ಯ ಬೀದಿ ಉತ್ಸವದ ಮೆರವಣಿಯ ಉದ್ದಕ್ಕೂ ಯುವಕ ಯುವತಿಯರ ನೃತ್ಯ ಚಿಕ್ಕ ಮಕ್ಕಳಿನಿಂದ ಹಿಡಿದು ವಯೋವೃದ್ದರು , ಮಹಿಳೆಯರು ಪಾಲ್ಗೊಂಡರು.

ಪಟ್ಟಣದ ಹೊಸನಗರ ರಸ್ತೆಯಲ್ಲಿನ ತಾವರೆಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಯಿತು.

ನಿನ್ನೆ ಬೆಳಗ್ಗೆ ಯಿಂದಲೂ ನೂರಾರು ಪೊಲೀಸ್ ಬಿಗಿ ಬಂದೋಬಸ್ತ್ ಪಟ್ಟಣದಾದ್ಯಂತ ಮಾಡಲಾಗಿತ್ತು.ಡಿವೈಎಸ್ಪಿ ಶಾಂತಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಸಿಪಿಐ ಗಿರೀಶ್ ನೇತ್ರತ್ವದಲ್ಲಿ ಬಂದೋಬಸ್ತ್ ನಡೆದಿತ್ತು.ತಹಶೀಲ್ದಾರ್ ವಿ ರಾಜೀವ್ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡು ಅವಲೋಕಿಸಿದರು.

ಈ ನಡುವೆ ಮೆರವಣಿಗೆಯಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.ಬೇಳೂರು ಕುಣಿತಕ್ಕೆ ಯುವಕರು ಸಾಥ್ ನೀಡಿದರು.ಕಾಂಗ್ರೆಸ್ ನ ಸ್ಥಳೀಯ ನಾಯಕರು ಜೊತೆಯಲ್ಲಿದ್ದರು.

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೈ.ಜೆ.ಕೃಷ್ಣ, ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಅರ್.ಈ.ಈಶ್ವರಶೆಟ್ಟಿ, ಪ್ರಧಾನಕಾರ್ಯದರ್ಶಿ ಪಿ.ಸುದೀರ್, ಎಂ.ಬಿ.ಮಂಜುನಾಥ, ಸುರೇಶ್‌ಸಿಂಗ್, ಸುದೀಂದ್ರಪೂಜಾರಿ, ತೀರ್ಥೇಶ್‌ ಅಡಿಕಟ್ಟು, ರವೀಂದ್ರಕೆರೆಹಳ್ಳಿ, ಆರ್.ರಾಘವೆಂದ್ರ, ಶ್ರೀನಿವಾಸ್ ಅಚಾರ್, ಎನ್.ಸತೀಶ್, ಗಣೇಶ್ ಎನ್.ಕಾಮತ್,ಆರ್.ಹೆಚ್.ಶ್ರೀನಿವಇನ್ನಿತರ ಹಲವು ಹಿಂದೂ ಮಹಾಸಭಾದ ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗಣಪತಿ ಮೆರವಣಿಗೆ ಹಿನ್ನಲೇಯಲ್ಲಿ ಪೊಲೀಸ್ ಇಲಾಖೆ ಗೃಹ ರಕ್ಷಕ ದಳ ಪಟ್ಟಣದ ಎಲ್ಲೇಡೆ ಬಿಗಿ ಬಂದೋಬಸ್ತುನೊಂದಿಗೆ ಸಿಸಿಟಿವಿ ಡ್ರೋಣ್ ಕ್ಯಾಮರಾಗಳಲ್ಲಿ ಹಾಗೂ ಮೆರವಣಿಗೆ ಪ್ರತಿ ಹಂತದಲ್ಲಿ ಸೂಕ್ತ ಪರಿಶೀಲನೆ ನಡೆಸಿದರು.

Exit mobile version