SAGARA| ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ಸು | ನೆರವಿಗೆ ಧಾವಿಸಿದ ಮಾಜಿ ಶಾಸಕ ಬೇಳೂರು

ಸಾಗರ: ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ನರ್ಸರಿ ತಿರುವಿನಲ್ಲಿ ಖಾಸಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದಂತಹ ಖಾಸಗಿ ಬಸ್ ಎದುರು ಭಾಗದಿಂದ ಬಂದ ಲಾರಿಯನ್ನು ತಪ್ಪಿಸಲು ಹೋಗಿ ಐಗಿನಬೈಲು ನರ್ಸರಿ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಬಸ್ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂಬ ಮಾಹಿತಿಬಲಭ್ಯವಾಗಿದೆ.

ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಾರ್ಗ ಮಧ್ಯ ಹೊರಟಿದ್ದರು. ಅಪಘಾತದ ಸ್ಥಳವನ್ನು ನೋಡಿ ವಾಹನ ನಿಲ್ಲಿಸಿ ಪ್ರಯಾಣಿಕರು ಹಾಗೂ ವಾಹನದ ಚಾಲಕ ನಿರ್ವಾಹಕರಿಗೆ ಧೈರ್ಯ ತುಂಬಿ ಅಲ್ಲಿಂದ ತಮ್ಮ ಕಾರ್ಯಕ್ರಮಕ್ಕೆ ಹೊರಟರು.

Exit mobile version