450 ಲೀ ಡಿಸೇಲ್ ಕದ್ದ ಆರೋಪಿತರಿಂದ 9 ಲಕ್ಷದ ಟಾಟಾ ಗೂಡ್ಸ್ ವಾಹನ, 15 ಸಾವಿರ ನಗದು ವಶ

450 ಲೀ ಡಿಸೇಲ್ ಕದ್ದ ಆರೋಪಿತರಿಂದ 9 ಲಕ್ಷದ ಟಾಟಾ ಗೂಡ್ಸ್ ವಾಹನ, 15 ಸಾವಿರ ನಗದು ವಶ

ಸೊರಬ: ಏಪ್ರಿಲ್ 20ರ ರಾತ್ರಿ ಯಾರೋ ಕಳ್ಳರು ವಿಜಯಲಕ್ಷ್ಮಿ ರೈಸ್ ಮಿಲ್ ನ ಆವರಣದಲ್ಲಿ ನಿಲ್ಲಿಸಿದ್ದ 3 ಲಾರಿಗಳ ಡಿಸೆಲ್ ಟ್ಯಾಂಕ್ ನಲ್ಲಿದ್ದ ಅಂದಾಜು 45,000/- ರೂ ಮೌಲ್ಯದ ಸುಮಾರು 450 ಲೀಟರ್ ಡಿಸೇಲ್ ನ್ನು ಕಳ್ಳತನ ಮಾಡಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳ ಸಹಿತ 9 ಲಕ್ಷ ಮೌಲ್ಯದ ಒಂದು ಗೂಡ್ಸ್ ವಾಹನ, 15 ಸಾವಿರ ನಗದು ವಶ ಪಡಿಸಿಕೊಂಡಿದ್ದಾರೆ.

ಸೊರಬ ತಾಲ್ಲೂಕು ಕೋಲಗುಣಸಿ ವಾಸಿಯಾದ ಶ್ರೀ ವಿಕ್ರಂ ಭಟ್, 47 ವರ್ಷ ರವರು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ : 0110/2025 ಕಲಂ: 303 (2) ಬಿ.ಎನ್.ಎಸ್ ಕಾಯ್ದೆ* ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು

ಸದರಿ ಪ್ರಕರಣದಲ್ಲಿ ಕಳುವಾದ ಡೀಸೆಲ್ ಹಾಗೂ ಆರೋಪಿತರ ಪತ್ತೆಗಾಗಿ  ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಎ. ಜಿ. ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ,  ಕೇಶವ ಕೆ.ಇ ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ  ಸಂತೋಷ್ ಪಾಟೀಲ್ ಸಿಪಿಐ ಶಿಕಾರಿಪುರ ಟೌನ್ ವೃತ್ತ ರವರ ನೇತೃತ್ವದಲ್ಲಿ  ಪ್ರಶಾಂತ್ ಕುಮಾರ ಟಿ ಬಿ, ಪಿ.ಎಸ್.ಐ ಶಿರಾಳಕೊಪ್ಪ ಪೊಲೀಸ್ ಠಾಣೆ  ಸಿಬ್ಬಂಧಿಗಳಾದ ಸಿ.ಹೆಚ್.ಸಿ- ಸಂತೋಷಕುಮಾರ ಆರ್, ಸಿ.ಪಿ.ಸಿ- ರಾಕೇಶ್ ಜಿ ಮತ್ತು ಸಲ್ಮಾನ್ ಖಾನ್ ಹಾಜಿ ರವರುಗಳನ್ನೊ ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತರಾದ 1) ಸೋನು, 26 ವರ್ಷ, ಟಿಪ್ಪು ನಗರ ಬಲಭಾಗ 05 ನೇ ಕ್ರಾಸ್, ಶಿವಮೊಗ್ಗ ಟೌನ್ ಮತ್ತು 2) ಸೈಯದ್ ಹುಸೇನ್ @ ಗಫಾರ್, 25 ವರ್ಷ, ಬರ್ಮಪ್ಪ ನಗರ, ಶಿವಮೊಗ್ಗ ಟೌನ್, ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 9,00,000/- ರೂಗಳ ಟಾಟಾ ಇಂಟ್ರಾ ಗೂಡ್ಸ್ ವಾಹನ, ರೂ 15,000/- ನಗದು ಮತ್ತು 30 ಲೀಟರ್ ಸಾಮರ್ಥ್ಯದ 05 ಖಾಲಿ ಕ್ಯಾನ್ ಗಳನ್ನು* ಅಮಾನತ್ತು ಪಡಿಸಿಕೊಂಡಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Exit mobile version