Soraba | ಲೈಫ್ ಲ್ಲೇ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ | ಗುತ್ತಿಗೆದಾರನ ಮೇಲೆ ಹರಿಹಾಯ್ದ ಕುಮಾರ್ ಬಂಗಾರಪ್ಪ

ಸೊರಬ: ನನ್ನ ಲೈಫ್ ನಲ್ಲೇ ನಿಮಗೆ ಕೆಲಸ ಕೊಡಬಾರದು ಎಂದು ಡಿಸೈಡ್ ಮಾಡಿದ್ದೇನೆ ಅಂತಾ ಇವತ್ತು ತುಸು ಜೋರಾಗಿಯೇ ಗುತ್ತಿಗೆದಾರರೊಬ್ಬರ ಮೇಲೆ ಸೊರಬ ಶಾಸಕರು ಗರಂ ಆಗಿದ್ದರು.

ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪರವರು ರಸ್ತೆ ಕಾಮಗಾರಿ ವಿಳಂಬವಾಗಿದ್ದಕ್ಕೆ ಗುತ್ತಿಗೆದಾರರನ್ನ ತರಾಟೆ ತೆಗೆದುಕೊಂಡರು.

ನಿನ್ನ ಕುಟುಂಬದ ಮೇಲೆ ಗೌರವ ಇಟ್ಟು ಕೆಲಸ ಕೊಟ್ಟಿದ್ದೆ, ನಿಮ್ಮನ್ನು ಹುಡುಕಿಕೊಂಡು ಬಂದು ಕೆಲಸ ಮಾಡಿಸಿಕೊಳ್ಳ ಬೇಕಾ? ಮೂರು ವರ್ಷಗಳಿಂದ ಇದೆ ಕಥೆ ಹೇಳಿಕೊಂಡು ಬಂದಿದೀಯಾ? ಎಂದು ವಾಗ್ದಾಳಿ ನಡೆಸಿದ್ರು.

ಹೆಣಹಾಕುತ್ತಿದ್ದೀರಾ ಸೊರಬ ಟೌನ್ನ​ನ್ನು, ತಾಕತ್ತು ಇಲ್ಲ ಎಂದರೆ ಯಾಕೆ ಟೆಂಡರ್ ಹಿಡಿಯುತ್ತೀರಿ. ಕೂಡಲೇ ಕಾಮಗಾರಿ ಮುಗಿಸುವಂತೆ ಆಗ್ರಹಿಸಿದ್ರು.

ಬೆಳ್ಳಂಬೆಳಗೆ ಫೀಲ್ಡ್ ಇಳಿದು ಗುತ್ತಿಗೆದಾರ ನಾಗರಾಜ್ ಮೇಲೆ ಹರಿಹಾಯ್ದ ಶಾಸಕ ಕುಮಾರ್​ ಬಂಗಾರಪ್ಪರವರ (Kumar Bangarappa) ಈ ಕ್ಲಾಸ್​ಗೆ ಗುತ್ತಿಗೆದಾರ ತಣ್ಣಗಾಗಿದ್ದರು.

VIDEO LINK

ಗುತ್ತಿಗೆದಾರನನ್ನು ಶಾಸಕ ಕುಮಾರ್ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/F2CyfXEmQtc

Exit mobile version