
ಹೊಸನಗರ/ಕೊಲ್ಲೂರು.ಸೆ.11: ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಈ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಆಯೋಜಿಸಲಾಗಿದ್ದು ಅಕ್ಟೋಬರ್ 06 ರಿಂದ 12 ರ ತನಕ ನಡೆಯಲಿದೆ.
ಈ ಸಂಬಂಧ ಪೂರ್ವಭಾವಿ ಸಭೆಯನ್ನು ನಿಟ್ಟೂರು ಗ್ರಾಪಂ ಸಮುದಾಯ ಭವನದಲ್ಲಿ ಸೆ.13 ರಂದು ಕರೆಯಲಾಗಿದೆ.
ಗ್ರಾಮೀಣ ಪ್ರದೇಶವಾದ ನಿಟ್ಟೂರಿನಲ್ಲಿ ಆಟದ ಮೈದಾನ ವಿಸ್ತರಣೆ, ರಸ್ತೆ ದುರಸ್ಥಿ, ಪರಿಸರ ಸ್ವಚ್ಚತೆ, ಸಾಮಾಜಿಕ ಅರಿವು ಮತ್ತು ಇತರ ವಿಚಾರಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗುವುದು.
ಎನ್ಎಸ್ಎಸ್ ವಿಶೇಷ ಶಿಬಿರ ಯಶಸ್ವಿ ಮಾಡುವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ರೂಪುರೇಷೆ ಸಿದ್ದಪಡಿಸಲು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀ ಮೂಕಾಂಬಿಕ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಅರುಣ ಪ್ರಕಾಶ್ ಕೊಲ್ಲೂರು ಮನವಿ ಮಾಡಿದ್ದಾರೆ.