ಜೇನಿ ಗ್ರಾಪಂ ನೂತನ ಅಧ್ಯಕ್ಷರಾಗಿ ವಿನೋದ ಟೀಕಪ್ಪ | ಹೊಸನಗರ ಬ್ಲಾಕ್ ಕಾಂಗ್ರೆಸ್ ಅಭಿನಂದನೆ


ಹೊಸನಗರ: ತಾಲೂಕಿನ ಜೀನಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ವಿನೋದ ಟೀಕಪ್ಪ ಆಯ್ಕೆಯಾಗಿದ್ದಾರೆ.
9 ಸದಸ್ಯಬಲದ ಜೇನಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದ್ದು ಹಿಂದಿನ ಅಧ್ಯಕ್ಷ ಲಕ್ಷಣ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿತ್ತು. ಬಳಿಕ ಎಸಿಯವರ ಸೂಚನೆಯಂತೆ ಬುಧವಾರ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನೋದ ಟೀಕಪ್ಪ 5 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಂತೋಷ್ 4 ಮತಗಳನ್ನು ಪಡೆದರು.
ಅಭಿನಂದನೆ:
ಬಳಿಕ ನೂತನ ಅಧ್ಯಕ್ಷೆ ವಿನೋದ ಟೀಕಪ್ಪರಿಗೆ ಕಾಂಗ್ರೆಸ್ ಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು. ಮಾಜಿ ತಾಪಂ ಸದಸ್ಯ ಬಿ.ಜಿ.ಚಂದ್ರಮೌಳಿ ಪಂಚಾಯ್ತಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಗ್ರಾಪಂ ಉಪಾಧ್ಯಕ್ಷೆ ಅಕ್ಷತಾ ನಾಗರಾಜ್, ಪಪಂ ಸದಸ್ಯ ಅಶ್ವಿನಿಕುಮಾರ್, ಪ್ರಮುಖರಾದ ಸುನೀಲ್ ಗುಬ್ಬಿಗಾ, ರಾಮಪ್ಪ, ಲಕ್ಷö್ಮಣ, ವಾಸಪ್ಪ, ಜಬಗೋಡು ರುದ್ರಪ್ಪಗೌಡ್ರು, ಹೂವಪ್ಪ, ಉಬೇದುಲ್ಲಾ ಇದ್ದರು.

ಅಭಿವೃದ್ಧಿಗೆ ಒತ್ತು ನೀಡಿ:

ಜೇನಿ ಗ್ರಾಪಂ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಿ. ಪಂಚಾಯ್ತಿ ಅಧ್ಯಕ್ಷರಾಗಿ ಯಶಸ್ವಿಯಾಗುವ ಮೂಲಕ ಬಡರೈತ ಕೂಲಿಕಾರ್ಮಿಕರ ಸಮಸ್ಯೆಗೆ ಸ್ಪಂದಿಸಲಿ

ಬಿ.ಜಿ.ಚಂದ್ರಮೌಳಿ ಕೊಡೂರು

Exit mobile version