ಮೈದುಂಬಿದ ಚಕ್ರಾ ಡ್ಯಾಂ | ಕಣ್ಮನ ಸೆಳೆದ ಓವರ್ ಫ್ಲೋ.. | ಹರಿದು ಬರುತ್ತಿದೆ ಪ್ರವಾಸಿಗರ ದಂಡು

ಮೈದುಂಬಿದ ಚಕ್ರಾ ಡ್ಯಾಂ | ಕಣ್ಮನ ಸೆಳೆದ ಓವರ್ ಫ್ಲೋ.. | ಹರಿದು ಬರುತ್ತಿದೆ ಪ್ರವಾಸಿಗರ ದಂಡು.

ಹೊಸನಗರ: ನಗರ ಹೋಬಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಚಕ್ರಾ ಜಲಾಶಯ ಮೈದುಂಬಿಕೊಂಡಿದ್ದು, ಭಾನುವಾರ ಬೆಳಿಗ್ಗೆಯಿಂದ ಓವರ್ ಫ್ಲೋ ಆಗುತ್ತಿದ್ದು ಕಣ್ಮನ ಸೆಳೆಯುತ್ತಿದೆ.

579ಮೀ ಗರಿಷ್ಠ ಮಟ್ಟದ ಜಲಾಶಯ ಸಂಪೂರ್ಣ ತುಂಬಿದೆ. ಲಿಂಗನಮಕ್ಕಿಗೆ ನೀರು ಹರಿಸಲಾಗುತ್ತಿದ್ದರು ಕೂಡ ಹೆಚ್ಚಿನ ಒಳಹರಿವು ಇರುವ ಕಾರಣ ಓವರ್ ಫ್ಲೋ ಆಗುತ್ತಿದೆ.

ಓವರ್ ಫ್ಲೋನಿಂದಾಗಿ ನೀರು ಸುಮಾರು 300 ಅಡಿ ಕೆಳಗೆ ಧುಮುಕುತ್ತಿದ್ದು ರೋಮಾಂಚನ ಗೊಳಿಸುತ್ತಿದೆ. ಎಡಬಿಡದೇ ಸುರಿಯುತ್ತಿರುವ ಮಳೆ, ವನ್ಯಸಿರಿಯನ್ನು ಆಕ್ರಮಿಸಿಕೊಂಡಿರುವ ಮೋಡಗಳು, ಸುತ್ತಲೂ ಕಂಡುಬರುವ ಜಲರಾಶಿ ನಡುವೆ ಇಡೀ ಚಕ್ರಾ ಜಲಾಶಯದ ನೋಟ ಚಿತ್ತಾಕರ್ಷಕವಾಗಿ ಮೋಡಿ‌ ಮಾಡುತ್ತಿದೆ.
ಚಕ್ರಾ ಜಲಾಶಯ ಓವರ್ ಫ್ಲೋ ಆಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪ್ರವಾಸಿಗರು ಹರಿದು ಬರಲಾರಂಭಿಸಿದ್ದಾರೆ.


ಪಾಸ್ ಬೇಕು:
ಚಕ್ರಾ ಸಾವೇಹಕ್ಲು ಜಲಾಶಯಕ್ಕೆ ಹೋಗಲು ಪಾಸ್ ಬೇಕು. ಮಾಸ್ತಿಕಟ್ಟೆ ಕೆಪಿಸಿ ಕಚೇರಿಯಲ್ಲಿ ಪಾಸ್ ನೀಡಲಾಗುತ್ತಿದೆ.

Exit mobile version