ಇದೀಗ ಕೆ.ಇ.ಕಾಂತೇಶ್ ಸರದಿ : ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ

ಈಗ ಕೆ.ಇ.ಕಾಂತೇಶ್ ಸರದಿ : ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ

ಶಿವಮೊಗ್ಗ: ದೇಶಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡೈವ್ ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಿನಲ್ಲೆ ಮಾಜಿ ಉಪಮುಖ್ಯಮಂತ್ರಿ , ಹಾಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಈ ಕಾಂತೇಶ್ ನ್ಯೂಸ್‌ಚಾನಲ್ ಗಳು, ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ದ ಯಾವುದೇ ರೀತಿಯ ಮಾನಹಾನಿ ವರದಿ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದಾರೆ.

ವಕೀಲರಾಧ ಎಂ ವಿನೋದ್ ಕುಮಾರ್ ಅವರ ಮೂಲಕ ಕೆ.ಈ ಕಾಂತೇಶ್ ಬೆಂಗಳೂರಿನ ಸಿಸಿಹೆಚ್11 6ನೇ ಸಿಟಿಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಇದೇತಿಂಗಳು ಓಎಸ್ ೩೨೨೪/೨೦೨೪ ದಾಖಲಿಸಿದ್ದು ,  U/S 26 AND ORDER 7 RULE 1 OF CPC ಅಡಿ ನ್ಯಾಯಾಲಯ 50 ಸುದ್ದಿ ಮಾಧ್ಯಮಗಳಿಗೆ ನೋಟೀಸ್ ಜಾರಿಗೊಳಿಸಿ ಕೆ.ಈ ಕಾಂತೇಶ್ ಅವರ ವಿರುದ್ದ ಯಾವುದೇ ರೀತಿಯ ಮಾನ ಹಾನಿ ವರದಿಗಳನ್ನು  ಪ್ರಕಟಿಸಬಾರದು,ವಿಡಿಯೋಗಳನ್ನು ಪ್ರಸಾರ ಮಾಡದಂತೆ ಎಂದು ನಿರ್ಬಂಧಕಾಜ್ಞೆ ಜಾರಿ ಮಾಡಿದೆ

Exit mobile version