
-
ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದ ವಾತಾವರಣ ಬೇಕು |ಕೇವಲ ಬರವಣಿಗೆ ಸಾಹಿತ್ಯವಲ್ಲ.. ಅಕ್ಷರ ಜ್ಞಾನ, ವ್ಯಾಕರಣದ ಮೇಲೆ ಹಿಡಿತ ಅಗತ್ಯ | ಸಾಹಿತಿ ತಿರುಪತಿ ನಾಯಕ್
ಹೊಸನಗರ: ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹದಾಯಕವಾದ ವಾತಾವರಣ ಸಮಾಜದ ಎಲ್ಲಾ ಸ್ತರಗಳಿಂದ ಸಿಗಬೇಕಾಗಿದೆ. ಈ ತರಹದ ಪ್ರೋತ್ಸಾಹ ಸಿಕ್ಕಲ್ಲಿ ಎಲ್ಲಾ ಕಡೆಯಲ್ಲೂ ಸಾಹಿತ್ಯದ ವಾತಾವರಣ ಕಾಣಬಹುದು ಎಂದು ತಾಲೂಕಿನ ಹಿರಿಯ ಸಾಹಿತಿ ಹೊಸನಗರದ ತಿರುಪತಿ ನಾಯಕ್ ತಿಳಿಸಿದರು.
ಅವರು ಶನಿವಾರ ಹೊಸನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ದಸರಾ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿ, ಕೇವಲ ಬರವಣಿಗೆ ಸಾಹಿತ್ಯ ಎನಿಸುವುದಿಲ್ಲ. ಅಕ್ಷರ ಜ್ಞಾನ, ಭಾಷಾ ಪ್ರೌಢಿಮೆ ಮತ್ತು ವ್ಯಾಕರಣದ ಮೇಲೆ ಹಿಡಿತ ಇರಬೇಕು ಎಂದರು.
ತಾಲೂಕಿನ ಹಿರಿಯ ಸಾಹಿತಿ ನಾಗರಕೊಡಿಗೆ ಗಣೇಶ್ ಮೂರ್ತಿ, ಮಕ್ಕಳಲ್ಲಿ ಸಾಹಿತ್ಯ ರಚನೆ ಮಾಡುವ ಪ್ರೋತ್ಸಾಹದಾಯಕ ವಾತಾವರಣ ಪ್ರತಿ ಕುಟುಂಬದಲ್ಲಿ ಸಿಕ್ಕರೆ ಮುಂದೆ ಪ್ರತಿ ಮನೆಯಿಂದ ಒಬ್ಬ ಸಾಹಿತಿಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತ.ಮ.ನರಸಿಂಹ ವಹಿಸಿದ್ದರು. ದಸರಾ ಕವಿ ಗೋಷ್ಠಿಯಲ್ಲಿ ಕವಿಗಳಾದ ತಿರುಪತಿ ನಾಯಕ್,
ನಾಗರಕೊಡಿಗೆ ಗಣೇಶ ಮೂರ್ತಿ, ಎಚ್ ಆರ್ ಪ್ರಕಾಶ್, ಕುಮಾರಿ ಅನನ್ಯ, ಕುಮಾರಿ ತೇಜಸ್ವಿನಿ, ಕುಮಾರಿ ತನುಶ್ರೀ ಕವನ ವಾಚನ ಮಾಡಿದರು.
ಸಭೆಯಲ್ಲಿ ಕೋಶಾಧ್ಯಕ್ಷ ಎನ್ ಹೆಚ್ ನಿಂಗಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ರಾಘವೇಂದ್ರ ಜಯನಗರ, ಪ್ರಶಾಂತ್ ಹೊಸನಗರ, ಚನ್ನಬಸಪ್ಪ ಗೌಡ, ಶ್ರೀಮತಿ ಗೀತಾ, ಶ್ರೀಮತಿ ಅಕ್ಷತಾ,ಎನ್ ಆರ್ ರಮೇಶ್, ಇಕ್ಬಾಲ್ ಜಯನಗರ, ಉಪಸ್ಥಿತರಿದ್ದರು.
ಹೆಚ್ಆರ್ ಪ್ರಕಾಶ್ ಸ್ವಾಗತಿಸಿದರು. ಕಾರ್ಯದರ್ಶಿ ಎಂಕೆ ವೆಂಕಟೇಶಮೂರ್ತಿ ವಂದಿಸಿದರು.